ದಿನದ ಸುದ್ದಿ
ವಿಡಿಯೊ | ‘ಹತ್ತು ರೂ ಗೆ ತಿಂಡಿ ಮತ್ತು ಊಟ’ ಕೊಡ್ತಾರೆ ದಾವಣಗೆರೆಯ ಅಣ್ಣಪ್ಪ
ಸುದ್ದಿದಿನ, ದಾವಣಗೆರೆ : “ಇದು ತುಂಬಾ ದುಬಾರಿ ದುನಿಯಾ” ಎಂಬ ಮಾತು ಆಗಾಗ ನಾವು ಕೇಳುತ್ತಲೇ ಇರುತ್ತೇವೆ. ಅಂತಹದ್ದರಲ್ಲಿ ದಾವಣಗೆರೆಯ ನಿಟ್ಟುವಳ್ಳಿ ನಿವಾಸಿ ಅಣ್ಣಪ್ಪ ಹತ್ತು ರೂಪಾಯಿಗೆ ತಮ್ಮ ಅನ್ನ ಪೂರ್ಣ ಕ್ಯಾಂಟೀನ್ ಮೂಲಕ ತಿಂಡಿ ಮತ್ತು ಊಟ ಕೊಡುವುದರ ಮೂಲಕ ಬಡ ಜನತೆಯ ಅದರಲ್ಲೂ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.
ಅಂದಹಾಗೆ ಈ ಅನ್ನಪೂರ್ಣ ಕ್ಯಾಂಟೀನ್ ನಗರದ ದಾವಣಗೆರೆ ಕ್ಲಬ್ ಪಕ್ಕದಲ್ಲಿದೆ. ಈ ಕ್ಯಾಂಟೀನ್ ಮಾಲೀಕ ಅಣ್ಣಪ್ಪ ತಮ್ಮ ಬದುಕು ಮತ್ತು ಸಮಾಜ ಸೇವೆಯನ್ನು ಒಟ್ಟೊಟ್ಟಿಗೆ ಮಾಡುತ್ತ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಪಡೆದಿರುವ ಇವರು ಸ್ವ ಉದ್ಯೂಗ ಕ್ಕೆ ಕೈ ಹಾಕಿ ಯಶಸ್ವಿಯಾಗಿ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ. ಎಲ್ಲರೂ ಸರ್ಕಾರಿ ನೌಕರಿ ನೆಚ್ಚಿಕೊಂಡು ಕೂತರೆ ಬದುಕು ಸಾಗಿಸಲು ಕಷ್ಟವಾಗಬಹುದು. ಅಂತಹದರಲ್ಲಿ ಸ್ವಾವಲಂಬಿಯಾಗಿ ಬದುಕನ್ನು ಕಟ್ಟಿಕೊಂಡಿದ್ದಾರೆ ಅಣ್ಣಪ್ಪ.
ಕ್ಯಾಂಟೀನ್ ಮಾಲೀಕ ಅಣ್ಣಪ್ಪ ಅವರ ಮಾತು
ಈ ಕ್ಯಾಂಟೀನ್ ಆರಂಭವಾಗಿ ಒಂದು ವರ್ಷವಾಗಿದ್ದು, ದಿನಕ್ಕೆ ಸುಮಾರು 700-800ಮಂದಿ ಕ್ಯಾಂಟೀನ್ ನಲ್ಲಿ ಸೇವಿಸುತ್ತಾರೆ. ಅದರಲ್ಲೂ ಕಾಲೇಜು ವಿದ್ಯಾರ್ಥಿಗಳಿಗಂತೂ ಇದು ತುಂಬಾ ಉಪಯೋಗವಾಗುತ್ತಿದೆ ಎನ್ನುತ್ತಾರೆ ಕ್ಯಾಂಟೀನ್ ಮಾಲೀಕ ಅಣ್ಣಪ್ಪ. ಈ ಕ್ಯಾಂಟೀನ್ ಗೆ ದಾವಣಗೆರೆ ಕ್ಲಬ್ ನವರೂ ಕೂಡ ಒಂದಷ್ಟು ದಿವಸ ಮಳಿಗೆಗೆ ಯಾವುದೇ ಬಾಡಿಗೆ, ಕರೆಂಟ್ ಬಿಲ್,ವಾಟರ್ ಬಿಲ್ ಪಾವತಿಸದಂತೆ ಉಚಿತವಾಗಿ ಮಳಿಗೆ ನೀಡಿದ್ದಾರೆ ಅವರಿಗೆ ನಾನು ಋಣಿ ಎನ್ನುತ್ತಾರೆ ಅಣ್ಣಪ್ಪ.
ಒಟ್ಟಿನಲ್ಲಿ ಈ ಕ್ಯಾಂಟೀನ್ ನಿಂದ ಜನರಿಗೆ ಉಪಯೋಗವಾಗಿರುವಂತೂ ಸತ್ಯ.
ಸುದ್ದಿದಿನ.ಕಾಂ|ವಾಟ್ಸಾಪ್|9980346243