ದಿನದ ಸುದ್ದಿ
ದಾವಣಗೆರೆ | ಶವ ಸಾಗಿಸಲು ಉಚಿತ ವಾಹನಗಳ ವ್ಯವಸ್ಥೆ ; ಬೆಡ್ ಮತ್ತು ಆಕ್ಸಿಜನ್ ವಿವರ : ಜಿಲ್ಲಾಧಿಕಾರಿ
ಸುದ್ದಿದಿನ, ದಾವಣಗೆರೆ : ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಬುಧವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತಗಳೊಂದಿಗೆ ಸಭೆ ನಡೆಸಿ ಮಾತನಾಡಿದರು.
- ದಾವಣಗೆರೆಯಲ್ಲಿ ಜಿಲ್ಲಾಸ್ಪತ್ರೆಯ ವತಿಯಿಂದ 02 ಮತ್ತು ಮಹಾನಗರಪಾಲಿಕೆಯ 01 ಮುಕ್ತಿವಾಹಿನಿ ಸೇರಿದಂತೆ ಒಟ್ಟು 03 ಶವ ಸಾಗಿಸುವ ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಈ ವಾಹನಗಳ ಮೂಲಕ ಶವ ಸಾಗಿಸಲು ಯಾವುದೇ ಶುಲ್ಕ ಪಾವತಿಸುವ ಅಗತ್ಯವಿಲ್ಲ. ಸೇವೆ ಉಚಿತವಾಗಿದ್ದು ಪಾಲಿಕೆ ಮುಕ್ತಿವಾಹಿನಿಗೆ ಡಾ.ಸಂತೋಷ್‍ಕುಮಾರ್ ಮೊಬೈಲ್ ಸಂಖ್ಯೆ 9448655704 ಇವರನ್ನು ಸಂಪರ್ಕಿಸಬಹುದು.
| ಮಹಾಂತೇಶ ಬೀಳಗಿ, ಜಿಲ್ಲಾಧಿಕಾರಿ
ಬೆಡ್ ಮತ್ತು ಆಕ್ಸಿಜನ್ ವಿವರ
ಜಿಲ್ಲಾಧಿಕಾರಿಗಳು, ಸಚಿವರು ಕೇಳಿದಂತೆ ವಿವರ ನೀಡಿ, ನಗರದಲ್ಲಿ 2425 ಕೋವಿಡ್ ರೋಗಿಗಳಿಗೆ ಬೆಡ್ ಮೀಸಲಿಟ್ಟಿದ್ದು, ಈ ಪೈಕಿ 515 ಭರ್ತಿಯಾಗಿದ್ದು 1908 ಖಾಲಿ ಇವೆ. ಸಿಜಿ ಆಸ್ಪತ್ರೆಯಲ್ಲಿ 181, ಎಸ್‍ಎಸ್ ಆಸ್ಪತ್ರೆಯಲ್ಲಿ 128, ಬಾಪೂಜಿಯಲ್ಲಿ 76 ಮತ್ತು ಸಿಟಿ ಸೆಂಟರ್‍ನಲ್ಲಿ 10 ಜನ ರೋಗಿಗಳು ಇದ್ದು ಒಟ್ಟಾರೆ 282 ಜನರು ಆಕ್ಸಿಜನ್ ಸಹಾಯ ಪಡೆದಿದ್ದರೆ 179 ಆಸ್ಪತ್ರೆಯಲ್ಲೇ ಐಸೋಲೇಟ್ ಆಗಿದ್ದಾರೆ. ಹೋಮ್ ಐಸೋಲೇಷನ್‍ನಲ್ಲಿ 937 ಜನರಿದ್ದು ಇವರ ನಿಗಾ ವಹಿಸಲಾಗುತ್ತಿದೆ ಎಂದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243