ದಿನದ ಸುದ್ದಿ

ದಾವಣಗೆರೆ | “ಹೇ ಕೂತ್ಕೊಳಯ್ಯ ನಿಂದೇನು” ಮಾಡಾಳ್ ಅವಾಜ್ ಗೆ ಸಂಸದ ಸಿದ್ದೇಶ್ವರ ಗರಂ..!?

Published

on

ಸುದ್ದಿದಿನ,ದಾವಣಗೆರೆ : ಬಿಜೆಪಿ ಪಕ್ಷದ ನಾಯಕರಿಬ್ಬರು ಏಕವಚನದಲ್ಲಿ ಬೈದಾಡಿಕೊಂಡು, ಕೈ ಕೈ ಮಿಲಾಯಿಸುವ ಪರಿಸ್ಥಿತಿ ಯೊಂದು ನಗರದಲ್ಲಿ ನಿರ್ಮಾಣವಾಗಿತ್ತು.

ಕೊವಿಡ್ ಸೋಂಕಿನ ಬಗ್ಗೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ‌ಸ್ವಪಕ್ಷೀಯರಾದ ಸಂಸದ ಸಿದ್ದೇಶ್ವರ ಹಾಗೂ ಶಾಸಕ ಮಾಡಾಳು ವಿರುಪಾಕ್ಷಪ್ಪ ಮಾತಿನ ಚಕಮಕಿಯು ಶನಿವಾರ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದಿದ್ದು ಅಚ್ಚರಿ ಮೂಡಿಸಿತು.

ಉಸ್ತುವಾರಿ ಸಚಿವ ಭೈರತಿ ಭಸವರಾಜ್ ಹಾಗೂ ವೈಧ್ಯಕೀಯ ಸಚಿವ ಡಾ.ಸುಧಾಕರ್ ಸಮ್ಮುಖದಲ್ಲಿ ಈ ಘಟನೆ ನಡೆದಿದ್ದು, “ಹೇ ಎನೋ ಮಾತಾಡ್ತೀಯಾ ನೀನು ಎಂದ ಸಂಸದ, ಹೇ ಕೂತ್ಕೊಳಯ್ಯ, ಏನ್ ಮಾತಾಡ್ತೀಯ ನೀನು, ನಿಂದೇನು” ಎಂದು ಏಕವಚನದಲ್ಲೇ ಶಾಸಕ ಮಾಡಾಳು ವಿರುಪಾಕ್ಷಪ್ಪ ಅವರು ಬೈದಾಡಿಕೊಂಡರು.

ಮಾಡಾಳು ವಿರುಪಾಕ್ಷಪ್ಪ ಕುಡಿಯುವ ನೀರಿನ ಬಗ್ಗೆ ಮಾತಾಡುತ್ತಿರುವ ವೇಳೆ ಸಂಸದ ಸಿದ್ದೇಶ್ವರ ಆಕ್ಷೇಪಣೆ ವ್ಯಕ್ತಪಡಿಸಿದಾಗ,‌ ಸಂಸದರ ಆಕ್ಷೇಪಣೆಗೆ ಏಕವಚನದಲ್ಲಿ ಚನ್ನಗಿರಿ ಶಾಸಕ ಮಾಡಾಳು ವಿರುಪಾಕ್ಷಪ್ಪ ಅವರು ತಿರುಗೇಟು ನೀಡಿದರು.

ಮಾಡಾಳು ವಿರುಪಾಕ್ಷಪ್ಪ ಮಾತಿಗೆ ಕುರ್ಚಿಯಿಂದ ಎದ್ದು ಮಾಡಾಳು ಬಳಿ ಬಂದ ಸಂಸದ ಸಿದ್ದೇಶ್ವರ ಅವರನ್ನು ತಡೆದು ಎಸ್ ಪಿ ಹನುಮಂತರಾಯ ಮಧ್ಯ ಪ್ರವೇಶಿಸಿ ಗಲಾಟೆಗೆ ಬ್ರೇಕ್ ಕೊಟ್ಟರು.

ಸಂಸದ ಹಾಗೂ ಶಾಸಕರ ವರ್ತನೆಯಿಂದ ಶಾಸಕ ಮತ್ತು ಸಂಸದರನ್ನು ನೋಡುತ್ತ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಹಾಗೂ ವೈಧ್ಯಕೀಯ ಸಚಿವ ಡಾ.ಸುಧಾಕರ್ ಅವರು ಮೂಕ ಪ್ರೇಕ್ಷರಾದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version