ದಿನದ ಸುದ್ದಿ
ದಾವಣಗೆರೆ | ಜೂ.24 ರಂದು ಇಂಟರ್ನ್ಯಾಷನಲ್ ಪ್ರೆಂಡ್ಸ್ ಆಫ್ ಬುದ್ಧಿಸ್ಟ್ಸ್ ಚಾರಿಟಬಲ್ ಟ್ರಸ್ಟ್ ನಿಂದ ಬುದ್ಧ ಪೂರ್ಣಿಮೆ ; ಉಚಿತ ನೇತ್ರ ತಪಾಸಣಾ ಶಿಬಿರ
ಸುದ್ದಿದಿನ, ದಾವಣಗೆರೆ : ಇಂಟರ್ನ್ಯಾಷನಲ್ ಪ್ರೆಂಡ್ಸ್ ಆಫ್ ಬುದ್ಧಿಸ್ಟ್ಸ್ ಸೊಷಿಯಲ್ ,ಎಜುಕೆಷನಲ್ & ಚಾರಿಟಬಲ್ ಟ್ರಸ್ಟ್ ವತಿಯಿಂದ ಜೂ.24 ರಂದು ಬುದ್ಧ ಪೂರ್ಣಿಮೆ ಹಾಗೂ 131ನೇ ಅಂಬೇಡ್ಕರ್ ಜಯಂತಿ,, ಬುದ್ಧ ಪೂರ್ಣಿಮೆಯನ್ನು ಆಚರಿಸುವುದರ ಜೊತೆಗೆ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ.
ಇಂದು ಹಳೇಬಾತಿ ಗ್ರಾಮದ ಶ್ರೀ ಚನ್ನಪ್ಪ ಇವರ ಮನೆಯಲ್ಲಿ ಸಮಿತಿಯ ಸಭೆ ನಡೆಸಲಾಯಿತು. ಖ್ಯಾತ ನೇತ್ರ ತಜ್ಞರಾದ ಡಾ|| ಸುರೇಂದ್ರ, ಬೌದ್ಧ ಧರ್ಮಗುರುಗಳು ಹಾಗೂ ಇತರೆ ಗಣ್ಯವ್ಯಕ್ತಿಗಳನ್ನ ಕಾರ್ಯಕ್ರಮಕ್ಕೆ ಆಹ್ವಾನಿಸಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಸಮಿತಿ ಅಧ್ಯಕ್ಷರಾದ ಶ್ರೀ ಡಿ,ಎನ್ ಹಾಲೇಶ್ ನಲ್ಕದುರೆ , ಉಪಾಧ್ಯಕ್ಷರಾದ ಶ್ರೀ ಎಂ,ಎಸ್,ಕೃಷ್ಣದಾವಣಗೆರೆ, ಪ್ರಧಾನಕಾರ್ಯದರ್ಶಿ,ಹೆಚ್,ಕೆ, ಕೃಷ್ಣಅರಕೆರೆ, ಖಜಾಂಚಿ,ಹೆಚ್,ಕೆ, ಚನ್ನಪ್ಪಹಳೇಬಾತಿ ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243