ದಿನದ ಸುದ್ದಿ

ಬ್ರೇಕಿಂಗ್ | ಕೊರೋನಾ‌ ಸಂಕಷ್ಟದಲ್ಲೂ ದಾವಣಗೆರೆಯ ಜಿಲ್ಲಾಸ್ಪತ್ರೆಯಲ್ಲಿ ನಡೆಯುತ್ತಿದೆಯಾ ಕಿತ್ತಾಟ..!? ಹೀಗೊಂದು ಆಡಿಯೋ ವೈರಲ್..!

Published

on

ಸುದ್ದಿದಿನ ವಿಶೇಷ, ದಾವಣಗೆರೆ: ಕೊರೋನಾ ಸೋಂಕು ದಿನದಿಂದ ದಿನಕ್ಕೆ ‌ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲೆ ಅಕ್ಷರಶಃ ಆತಂಕಕ್ಕೊಳಗಾಗಿದೆ. ಮಹಾಮಾರಿ ಕೊರೋನಾ ವೈರಸ್ ತಡೆಗಟ್ಟಲು, ಜಿಲ್ಲಾಡಳಿತ ಶತಪ್ರಯತ್ನ ಮಾಡುತ್ತಿದೆ. ಆದರೆ, ಜಿಲ್ಲಾ ಆರೋಗ್ಯ ಇಲಾಖೆಯ ಸರ್ಜನ್ ಅವರ ಕಾರ್ಯವೈಖರಿ ವಿರುದ್ಧ ಅಸಮಾಧಾನದ ಮಾತುಗಳು ಕೇಳಿ ಬಂದಿವೆ.

ಇತ್ತೀಚೆಗೆ ವ್ಯಕ್ತಿಗಳಿಬ್ಬರು ಮಾತನಾಡಿದ ದೂರವಾಣಿಯ ಕರೆಯ ಆಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಈ ಅನುಮಾಕ್ಕೆ ಕಾರಣವಾಗಿದೆ.

ಮೂಲಭೂತ ಸೌಕರ್ಯ ಒದಗಿಸುವಲ್ಲಿ ನಿರ್ಲಕ್ಷ್ಯ..?

ಕೊರೋನಾ ಸೋಂಕು ತಡೆಯಲು ಆಸ್ಪತ್ರೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಸುಮಾರು ಒಂದು ಕಿಮೀ ಅಂತರದಲ್ಲಿ ಸಾರ್ವಜನಿಕರಿಗೆ ಪ್ರವೇಶವನ್ನು ನಿರ್ಬಂಧಿಸಬೇಕಿದೆ. ಕೊರೋನಾ ಪಾಸಿಟಿವ್ ಇರುವ ರೋಗಿಗಳಿಗೆ ಜಿಲ್ಲಾಸ್ಪತ್ರೆಯ ವಾರ್ಡ್ ಗಳಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಈ ವಾರ್ಡಿನ 100 ಮೀ ಅಂತರದಲ್ಲಿಯೇ ಹೆರಿಗೆ ವಾರ್ಡ್ ಇರುವ ಕಾರಣ ಸೂಕ್ತ ಭದ್ರತೆ ಒದಗಿಸಿ ಜನ ಸಂಚಾರಕ್ಕೆ ನಿರ್ಬಂಧ ಹೇರಬೇಕಿತ್ತು. ಆದರೆ ಆ ಕೆಲಸವಾಗಿಲ್ಲ.

ಆಸತ್ರೆಯಲ್ಲಿ ದಿನನಿತ್ಯ ಗ್ರೂಪ್ ಡಿ ನೌಕರರು, ಡಾಕ್ಟರ್ ಗಳು ಮತ್ತು ನರ್ಸ್ ಗಳು ಕೊರೋನಾ ಸೋಂಕಿತರ ವಾರ್ಡ್ ಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ‌. ಇವರಿಗೆ ಮುಂಜಾಗ್ರತಾ ಕ್ರಮವಾಗಿ ಸುಸಜ್ಜಿತವಾದ ಗುಣಮಟ್ಟದ ಪಿಪಿಇ ಕಿಟ್ ಗಳನ್ನು ಒದಗಿಸಿಲ್ಲ. ಡಿ ಗ್ರೂಪ್ ನೌಕರರು ಆಸ್ಪತ್ರೆಯಲ್ಲಿ ಕೆಲಸ ನಿರ್ವವಹಿಸಿ ಮನೆಗಳಿಗೆ ತೆರಳುತ್ತಿದ್ದಾರೆ. ಅವರಿಗೆ ಕನಿಷ್ಠ ಗುಣಮಟ್ಟದ ಮಾಸ್ಕ್ ಕೂಡ ನೀಡಲ್ಲ ಎಂಬ ಆರೋಪ ಕೇಳಿ ಬಂದಿದೆ.

ಕೊರೋನಾ ಸೋಂಕಿತರ ವಾರ್ಡ್ ಗಳಲ್ಲಿ ಕಾರ್ಯನಿರ್ವಹಿಸುವ ವೈದ್ಯರಿಗೆ ಸಮರ್ಪಕ ಸೌಲಭ್ಯ ನೀಡಿ ಅವರನ್ನು ಕ್ವಾರಂಟೈನ್ ಮಾಡಬೇಕು. ಸೋಂಕಿನ ಶಂಕಿತರನ್ನೂ ಕೂಡ, ಕೊರೋನಾ ಸೋಂಕು ಪಾಸಿಟಿವ್ ರೋಗಿಗಳ ಪಕ್ಕದ ವಾರ್ಡ್ ಗಳಲ್ಲೇ ಇರಿಸಲಾಗಿದೆ ಎಂದು ಹೇಳಲಾಗಿದೆ.

ಸಿಜಿ ಆಸ್ಪತ್ರೆ ಬಳಿ ಜಾಗೃತಿ ವಹಿಸಿಲ್ಲ !

ಕರೋನಾ ಪಾಸಿಟಿವ್ ಕಂಡುಬಂದ ಜಾಲಿನಗರ ಸೇರಿ ವಿವಿಧೆಡೆ ಸೀಲ್ ಡೌನ್ ಮಾಡಲಾಗಿದೆ. ಆದರೆ ಕೊರೋನಾ ಸೋಕಿತರಿರುವ ಆಸ್ಪತ್ರೆ ಬಳಿ ಜಾಗೃತೆ ವಹಿಸಲ್ಲ. ಜನ ಕೂಡ ಅಲ್ಲೇ ಸಂಚರಿಸುತ್ತಾರೆ. ನಿಯಮದ ಪ್ರಕಾರ ಜಿಲ್ಲಾಸ್ಪತ್ರೆಯನ್ನು ಸೀಲ್ ಡೌನ್ ಮಾಡಬೇಕು. ಜೊತೆಗೆ ಅಗತ್ಯಕ್ಕೆ ತಕ್ಕ ಕಡಿಮೆ ಸಿಬ್ಬಂದಿ ಕಾರ್ಯನಿರ್ವಹಿಸುವಂತೆ ಎಚ್ಚರ ವಹಿಸಬೇಕು. ಆದರೆ ಈ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ಜಿಲ್ಲಾ ಸರ್ಜನ್ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆಡಿಯೋ ದಲ್ಲಿ ದೂರಲಾಗಿದೆ.

ಹೆಲ್ತ್ ಸಿಟಿಗೆ ಅಂಟಿದ ಮಹಾಮಾರಿ !

ಸುಸಜ್ಜಿತ ಆಸ್ಪತ್ರೆಗಳು ಹಾಗೂ ಔಷಧ ಅಂಗಡಿಗಳ ಕಾರಣಕ್ಕೆ ದಾವಣಗೆರೆ ದೇಶದಲ್ಲೇ ಹೆಸರು ಪಡೆದಿದೆ. ಇಲ್ಲಿ ತಜ್ಞ ವೈದ್ಯರಿದ್ದಾರೆ. ಇಲ್ಲೇ ಕರೋನಾ ಸೋಂಕಿನ ಬಗ್ಗೆ ನಿರ್ಲಕ್ಷ್ಯ ವಹಿಸಲಾಗಿದೆ. ಇದೇ ಸ್ಥಿತಿ ಮುಂದುವರಿದರೆ ಮತ್ತಷ್ಟು ಪ್ರಕರಣಗಳು ಹೆಚ್ಚಾಗುವ ಅಪಾಯವಿದೆ ಎಂದು ಆಡಿಯೋದಲ್ಲಿ ಹೇಳಲಾಗಿದೆ.

ಮಹಾಮಾರಿ ತಡೆಗೆ ಜಿಲ್ಲಾಧಿಕಾರಿ ಶತ ಪ್ರಯತ್ನ

ಕರೋನಾ ತಡೆಗೆ ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶತ ಪ್ರಯತ್ನ ನಡೆಸುತ್ತಿದ್ದಾರೆ. ಮಹಾಮಾರಿ ಹರಡದಂತೆ ತಡೆಯಲು ಹಗಲಿರುಳು ಶ್ರಮಿಸುತ್ತಿದ್ದಾರೆ. ಆದರತೆ ಅದಕ್ಕೆ ಜಿಲ್ಲಾ ಸರ್ಜನ್ ಸ್ಪಂದಿಸುತ್ತಿಲ್ಲ ಎಂಬ ಮಾತುಗಳು ಕೇಳಿಬಂದಿವೆ.

ಸಮಾಜಿಕ ಜಾಲತಾಣದಲ್ಲಿ ವೈರಲ್ ಆದ ಆಡಿಯೋ ಲಿಂಕ್ ಈ ಕೆಳಗಿದೆ ನೋಡಿ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version