ದಿನದ ಸುದ್ದಿ
ದಾವಣಗೆರೆ | ಒಟ್ಟು ಒಂಭತ್ತು ಕಂಟೈನ್‍ಮೆಂಟ್ ಝೋನ್
ಸುದ್ದಿದಿನ, ದಾವಣಗೆರೆ : ಪೊಲೀಸ್ ಕ್ವಾಟ್ರಸ್ ಹೊಸ ಕಂಟೈನ್‍ಮೆಂಟ್ ಝೋನ್ ಆಗಿದ್ದು ಬಾಷಾನಗರ, ಜಾಲಿನಗರ, ಇಮಾಮ್‍ನಗರ, ಬೇತೂರು ರಸ್ತೆ, ಎಸ್‍ಪಿಎಸ್ ನಗರ, ಶಿವನಗರ, ರೈತರ ಬೀದಿ ಮತ್ತು ಕೆಟಿಜೆ ನಗರ ಒಟ್ಟು ಒಂಬತ್ತು ಕಂಟೈನ್ ಝೋನ್‍ಗಳಲ್ಲಿ ಸಕ್ರಿಯ ಸರ್ವೇಲೆನ್ಸ್ ಕಾರ್ಯ ನಡೆಯುತ್ತಿದ್ದು, ಸಾರಿ ಮತ್ತು ಐಎಲ್‍ಐ ಪ್ರಕರಣಗಳನ್ನು ದಾಖಲಿಸಿ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗುತ್ತಿದೆ.
ರೋಗ ನಿಯಂತ್ರಣ ಕುರಿತಾಗಿ ಇಂದು ತುರ್ತು ಸಭೆ ಕರೆದಿದ್ದು ಆರೋಗ್ಯ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ. ಪೌಷ್ಟಿಕಾಂಶಭರಿತ ಆಹಾರ ಖಾದ್ಯ ನೀಡಲು ಸೂಚಿಸಲಾಗಿದೆ. ಹಾಗೂ ಕೆಲವು ಎನ್‍ಜಿಓಗಳು ತಾವು ರೋಗಿಗಳಿಗೆ ಡ್ರೈಫ್ರೂಟ್ಸ್ ಮತ್ತು ಹಣ್ಣುಗಳನ್ನು ನೀಡುವುದಾಗಿ ಮುಂದೆ ಬಂದಿದ್ದಾರೆ. ಜಿಲ್ಲೆಯಲ್ಲಿ ಗೃಹ ಇಲಾಖೆ ನಿರ್ದೇಶನದಂತೆ ಏನೆಲ್ಲ ಸೌಲಭ್ಯಗಳು, ಸೇವೆಗಳು ದೊರೆಯಲಿವೆ ಎಂದು ತಿಳಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243