ದಿನದ ಸುದ್ದಿ
ದಾವಣಗೆರೆ ಕೊರೋನಾ | 106 ಆ್ಯಕ್ಟೀವ್ ಕೇಸ್ : ಒಟ್ಟು 3149 ನೆಗೆಟಿವ್
ಸುದ್ದಿದಿನ,ದಾವಣಗೆರೆ : ದಾವಣಗೆರೆಯಲ್ಲಿ ಮಂಗಳವಾರ 22 ಹೊಸ ಕೊರೊನಾ ಪಾಸಿಟಿವ್ ಪ್ರಕರಣ ವರದಿಯಾಗಿದ್ದು ಇವರಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.
ಮಂಗಳವಾರ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ಕೆಲ ಪ್ರಕರಣಗಳನ್ನು ಹೊರತುಪಡಿಸಿದರೆ ಇನ್ನುಳಿದವೆಲ್ಲ ಹಳೇ ರೋಗಿಗಳ ಸಂಪರ್ಕಿತರಾಗಿರುತ್ತಾರೆ. ಇಮಾಮ್‍ನಗರ ಕಂಟೈನ್‍ಮೆಂಟ್ ಝೋನ್‍ಗೆ ಹತ್ತಿರವಾದ ಆನೆಕೊಂಡ ಮತ್ತು ವಿನಾಯಕನಗರ ಸೇರಿ ಎರಡು ಹೊಸ ಪ್ರದೇಶಗಳಲ್ಲಿ ಪ್ರಕರಣ ದಾಖಲಾಗಿದ್ದು ಇಲ್ಲಿ ಸಹ ಹೊಸದಾಗಿ ಕಂಟೈನ್‍ಮೆಂಟ್ ಝೋನ್ ಮಾಡಲಾಗುವುದು.
ಮಂಗಳವಾರ ಜಿಲ್ಲೆಯಲ್ಲಿ 106 ಸಕ್ರಿಯ ಪ್ರಕರಣಗಳಿದ್ದು, ಇಂದು 647 ಜನರ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ಇಂದು 732 ವರದಿಗಳು ನೆಗೆಟಿವ್ ಎಂದು ಬಂದಿದ್ದು ಸಂಚಿತವಾಗಿ ಇಲ್ಲಿಯವರೆಗೆ 3149 ನೆಗೆಟಿವ್ ಎಂದು ವರದಿ ಬಂದಿದೆ. ಒಟ್ಟು 1430 ವರದಿಗಳು ಬರುವುದು ಬಾಕಿ ಇದೆ ಎಂದರು.
ಇಂದಿನ ರೋಗಿ ಸಂಖ್ಯೆ 1247 ರೋಗಿ ಸಂಖ್ಯೆ 694 ರ ಸಂಪರ್ಕ, ರೋಗಿ ಸಂಖ್ಯೆಗಳಾದ 1248 ,1249, 1250 ಇವರು ರೋಗಿ ಸಂಖ್ಯೆ 662ರ ಸಂಪರ್ಕ, ರೋಗಿ ಸಂಖ್ಯೆ 1251 ಕಂಟೈನ್‍ಮೆಂಟ್ ಝೋನ್‍ನ ಸಂಪರ್ಕ, ರೋ.ಸಂ. 1252, 1253 ಇವರು ರೋಗಿ ಸಂಖ್ಯೆ 662ರ ಸಂಪರ್ಕ, ರೋ.ಸಂ 1254 1255 ಇವರು ರೋಗಿ ಸಂಖ್ಯೆ 633 ರ ಸಂಪರ್ಕಿತರಾಗಿದ್ದಾರೆ.
ರೋಗಿ ಸಂಖ್ಯೆ 1292, 1293 ಇವರು ರೋಗಿ ಸಂಖ್ಯೆ 976 ರ ಸಂಪರ್ಕಿತರು, ರೋಗಿ ಸಂಖ್ಯೆ 1309 ರೋ.ಸಂ 663 ರ ಸಂಪರ್ಕಿತರು. ರೋ.ಸಂ 1365 ಮತ್ತು 1366 ಅಂತರ ಜಿಲ್ಲಾ ಪ್ರಯಾಣ ಹಿನ್ನೆಲೆ, ರೋಗಿ ಸಂಖ್ಯೆ 1368 ಅಂತರ ರಾಜ್ಯ ಕೇರಳ ಪ್ರಯಾಣ ಹಿನ್ನೆಲೆ, 1369 ಅಂತರ ರಾಜ್ಯ ಅಹಮದಾಬಾದ್, ರೋ.ಸಂ 1370 ಮತ್ತು 1371 ರೋಗಿ ಸಂಖ್ಯೆ 976 ರ ಸಂಪರ್ಕ, ರೋ.ಸಂ 1372 ಇವರು ರೋಗಿ ಸಂಖ್ಯೆ 556 ರ ಸಂಪರ್ಕ, ರೋ.ಸಂ 1373 ಇವರು ರೋಗಿ ಸಂಖ್ಯೆ 662 ರ ಸಂಪರ್ಕಿತರು. ರೋಗಿ ಸಂಖ್ಯೆ 1378 ಕಂಟೈನ್‍ಮೆಂಟ್ ಝೋನ್‍ನ ಸಂಪರ್ಕ ಹೊಂದಿದ್ದಾರೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಟಿಯಲ್ಲಿ ಜಿ.ಪಂ.ಸಿಇಓ ಪದ್ಮಾ ಬಸವಂತಪ್ಪ, ಡಿಹೆಚ್‍ಓ ಡಾ.ರಾಘವೇಂದ್ರ ಸ್ವಾಮಿ, ಎಸಿ ಮಮತಾ ಹೊಸಗೌಡರ್, ಜಿಲ್ಲಾ ಕೋವಿಡ್ ನೋಡಲ್ ಅಧಿಕಾರಿ ಪ್ರಮೋದ್ ನಾಯಕ್, ಡಿಎಸ್‍ಓ ಡಾ.ರಾಘವನ್ ಇದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243