ದಿನದ ಸುದ್ದಿ

ದಾವಣಗೆರೆ | ಎರಡೂವರೆ ತಿಂಗಳ ಮಗು ಸಂಪೂರ್ಣ ಗುಣಮುಖ : 3 ಜನರ ಬಿಡುಗಡೆ

Published

on

ಸುದ್ದಿದಿನ,ದಾವಣಗೆರೆ : ಎರಡೂವರೆ ತಿಂಗಳ ಮಗು ರೋಗಿ ಸಂಖ್ಯೆ 3638 ಸಂಪೂರ್ಣ ಗುಣಮುಖ ಹೊಂದಿ ಜಿಲ್ಲಾ ನಿಗದಿತ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು ಒಟ್ಟು ಶುಕ್ರವಾರ ಮೂವರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

ರೋಗಿ ಸಂಖ್ಯೆಗಳಾದ ಎರಡೂವರೆ ತಿಂಗಳಿನ ಮಗು 3638, 3640 ಹಾಗೂ 4339 ಇವರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 223 ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 171 ರೋಗಿಗಳು ಸಂಪೂರ್ಣರಾಗಿ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. 6 ಸಾವು ಸಂಭವಿಸಿದ್ದು, ಒಟ್ಟು 46 ಸಕ್ರಿಯ ಪ್ರಕರಣಗಳು ಇವೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version