ದಿನದ ಸುದ್ದಿ
ದಾವಣಗೆರೆ ಕೋವಿಡ್-19 | ಮೂವರು ಗುಣಮುಖ, ಆಸ್ಪತ್ರೆಯಿಂದ ಬಿಡುಗಡೆಗೆ ಸಿದ್ದ : ಜಿಲ್ಲಾಧಿಕಾರಿ
ಸುದ್ದಿದಿನ, ದಾವಣಗೆರೆ : ರೋಗಿ ಸಂಖ್ಯೆ 585, 616 ಮತ್ತು 635 ಈ ಮೂರು ಜನ ಸೋಂಕಿತರು ಸಂಪೂರ್ಣ ಗುಣಮುಖರಾಗಿದ್ದಾರೆ. ಶಿಷ್ಟಾಚಾರದಂತೆ ಎಲ್ಲ ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದರು.
ಮಂಗಳವಾರ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು,
ಗುಣಮುಖವಾಗಿರುವ ಮೂವರು ಏ.30 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ರಾಜ್ಯ ಸರ್ಕಾರದೊಂದಿಗೂ ಮಾತನಾಡಿದ್ದು ಇವರನ್ನು ಬಿಡುಗಡೆಗೊಳಿಸಲು ಕ್ರಮ ವಹಿಸಲಾಗುವುದು ಎಂದರು.
ಹಾಗೂ ಇನ್ನೂ ಮೂರು ಜನರು ಬಿಡುಗಡೆಗೆ ಸಿದ್ದರಾಗಿದ್ದಾರೆ. ಇದಕ್ಕೆ ಹಗಲಿರುಳು ಶ್ರಮಿಸುತ್ತಿರು ಸಿಜಿ ಆಸ್ಪತ್ರೆ ವೈದ್ಯರು, ಶುಶ್ರೂಷಕರು ಹಾಗೂ ಎಲ್ಲ ಸಿಬ್ಬಂದಿಗಳಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಹೃದಯ ರೋಗದಿಂದ ಬಳಲುತ್ತಿದ್ದ 18 ವರ್ಷದ ಯುವತಿ ರೋಗಿ ಸಂಖ್ಯೆ 581 ಇವರ ಕೋವಿಡ್ ಪರೀಕ್ಷೆ ಎರಡು ಸುತ್ತುಗಳಲ್ಲೂ ನೆಗೆಟಿವ್ ಎಂದು ಬಂದಿದೆ. ಆದರೆ ಹೃದ್ರೋಗದ ಕಾರಣಕ್ಕಾಗಿ ಅವರಿಗೆ ಚಿಕಿತ್ಸೆ ಮುಂದುವರೆಸಲಾಗಿದೆ. ಇವರನ್ನು ನಾಳೆ ವೈದ್ಯರ ಸಲಹೆ ಹಾಗೂ ಸರ್ಕಾರದ ಸೂಚನೆ ಮೇರೆಗೆ ನಗರದ ಬಾಪೂಜಿ ಅಥವಾ ಎಸ್‍ಎಸ್ ಆಸ್ಪತ್ರೆಗೆ ಶಿಫ್ಟ್ ಮಾಡಿಸಿ ಚಿಕಿತ್ಸೆ ಮುಂದುವರೆಸುವ ಬಗ್ಗೆ ನಿರ್ಧರಿಸಲಾಗುವುದು ಎಂದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243