ದಿನದ ಸುದ್ದಿ

ದಾವಣಗೆರೆ | ಬಾಷಾನಗರ, ಜಾಲಿನಗರಗಳಲ್ಲಿ ಕಂಟೈನ್‍ಮೆಂಟ್ ಝೋನ್ ಸ್ಥಾಪನೆ : ಸೋಂಕುಗಳ ಮೂಲ ಪತ್ತೆಗೆ ಪೊಲೀಸರ ಬಿರುಸಿನ ಕಾರ್ಯಾಚರಣೆ

Published

on

ಸುದ್ದಿದಿನ,ದಾವಣಗೆರೆ : ದಾವಣಗೆರೆಯಲ್ಲಿ ಏಪ್ರಿಲ್ 29 ಮತ್ತು 30 ರಂದು ವರದಿಯಾದ ಎರಡು ಕೊರೊನಾ ಪಾಸಿಟಿವ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಈ ಸೋಂಕುಗಳ ಮೂಲವನ್ನು ಸಿಡಿಆರ್ ವರದಿಯ ಮೂಲಕ ಪತ್ತೆ ಹಚ್ಚುವ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ಕಚೇರಿಯ ತಂಡ ಮತ್ತು ಜಿಲ್ಲಾ ಸರ್ವೇಕ್ಷಣಾ ಘಟಕದಿಂದ ನಡೆಯುತ್ತಿದೆ.

ರೋಗಿ ಸಂಖ್ಯೆ 533 ಕ್ಕೆ ಸಂಬಂಧಿಸಿದಂತೆ ಪಾಥಮಿಕ ಸಂಪರ್ಕ ಹೊಂದಿರುವವರು 26 ಹಾಗೂ ಸೆಕೆಂಡರಿ ಸಂಪರ್ಕದಲ್ಲಿರುವವರು 49 ಜನರನ್ನು ಪತ್ತೆ ಹಚಿ,್ಚ ಈ 75 ವ್ಯಕ್ತಿಗಳ ಗಂಟಲುದ್ರವ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ ಹಾಗೂ ಇವರನ್ನು ಇನ್ಸ್ಟಿಟ್ಯೂಷನ್ ಕ್ವಾರಂಟೈನ್ ಮಾಡಿ ಕ್ರಮ ಕೈಗೊಳ್ಳಲಾಗಿದೆ.

ರೋಗಿ ಸಂಖ್ಯೆ 556 ಕ್ಕೆ ಸಂಬಂಧಿಸಿದಂತೆ ಪಾಥಮಿಕ ಸಂಪರ್ಕ ಹೊಂದಿರುವವರು 10 ಹಾಗೂ ಸೆಕೆಂಡರಿ ಸಂಪರ್ಕದಲ್ಲಿರುವವರು 12 ಜನರನ್ನು ಪತ್ತೆ ಹಚ್ಚಿ ಇವರ ಗಂಟಲುದ್ರವ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ ಹಾಗೂ ಇವರನ್ನು ಇನ್ಸ್ಟಿಟ್ಯೂಷನ್ ಕ್ವಾರಂಟೈನ್ ಮಾಡಲಾಗಿದ್ದು, ಈ ರೋಗಿಗೆ ಸಂಬಂಧಿಸಿದ ಕಾಂಟಾಕ್ಟ್ ಟ್ರೇಸಿಂಗ್ ಇನ್ನೂ ಪ್ರಗತಿಯಲ್ಲಿದೆ.

ಬಾಷಾನಗರ ಮತ್ತು ಜಾಲಿನಗರಗಳಲ್ಲಿ ಕಂಟೈನ್‍ಮೆಂಟ್ ಝೋನ್ ಸ್ಥಾಪಿಸಿ ಡಿಸ್‍ಇನ್‍ಫೆಕ್ಷನ್ ಕೆಲಸ ಮಾಡಲಾಗಿದೆ. ಹಾಗೂ ಸಕ್ರಿಯ ಸರ್ವೇಕ್ಷಣಾ ಕ್ರಮಗಳನ್ನು ಸಹ ಕೈಗೊಂಡು ಸರ್ವೇ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version