ದಿನದ ಸುದ್ದಿ

ದಾವಣಗೆರೆ ಕೊರೋನಾ | ಒಟ್ಟು 121 ಜನ ಬಿಡುಗಡೆ : 31 ಆ್ಯಕ್ಟೀವ್ ಕೇಸ್

Published

on

ಸುದ್ದಿದಿನ,ದಾವಣಗೆರೆ: ದಿನ ನಿತ್ಯ ಸೋಂಕಿತರ ಸಂಖ್ಯೆ ಏರುತ್ತಲೇ ಇದ್ದು ಜಿಲ್ಲಾ ಆಸ್ಪತ್ರೆಯ ಮೂವರು ಸಿಬ್ಬಂದಿ ಸಹಿತ 6 ಮಂದಿಯಲ್ಲಿ ಕೊರೊನಾ ಇರುವುದು ಭಾನುವಾರ ದೃಢಪಟ್ಟಿದೆ.

27 ವರ್ಷದ ಮಹಿಳೆ (ಪಿ.3070), 32 ವರ್ಷ ಮತ್ತು 22 ವರ್ಷದ ಪುರುಷರು (ಪಿ. 3071, ಪಿ. 3072) ಆಸ್ಪತ್ರೆಯಲ್ಲಿ ಕೆಲಸ ಮಾಡುವ ವೈದ್ಯಕೀಯ ಸಿಬ್ಬಂದಿ ಆಗಿದ್ದಾರೆ. ಅವರಿಗೆ ಯಾರ ಸಂಪರ್ಕದಿಂದ ಕೊರೊನಾ ಬಂದಿದೆ ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ.

14 ವರ್ಷದ ಬಾಲಕಿಗೆ (ಪಿ.3073) ಆನೆಕೊಂಡದ 48 ವರ್ಷದ ವ್ಯಕ್ತಿಯಿಂದ (ಪಿ.1251) ಸೋಂಕು ಬಂದಿದೆ. 12 ವರ್ಷದ ಬಾಲಕನಿಗೆ (ಪಿ.3216) ಶಿವಕುಮಾರ ಸ್ವಾಮಿ ಬಡಾವಣೆಯ 45 ವರ್ಷದ ವ್ಯಕ್ತಿಯಿಂದ (ಪಿ.1852) ವೈರಸ್‌ ತಗುಲಿದೆ. 31 ವರ್ಷದ ಮಹಿಳೆಗೆ (ಪಿ.3217) ವಿನಾಯಕನಗರದ 69 ವರ್ಷದ ವೃದ್ಧನಿಂದ (ಪಿ.1378) ಸೋಂಕು ಬಂದಿದೆ.

ಭಾನುವಾರ 17 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, ಬಿಡುಗಡೆಯಾದವರ ಸಂಖ್ಯೆ 121ಕ್ಕೆ ಏರಿದೆ. ಒಟ್ಟು 156 ಸೋಂಕಿತರಲ್ಲಿ ನಾಲ್ವರು ಮೃತಪಟ್ಟಿದ್ದಾರೆ. 31 ಸಕ್ರಿಯ ಪ್ರಕರಣಗಳಿವೆ.ನಾಲ್ಕು ಜನ ಸೋಂಕಿನಿಂದ ಮರಣ ಹೊಂದಿದ್ದಾರೆ. ಈಗಾಗಲೇ 14 ಕಂಟೈನ್ಮೆಂಟ್ ಜೋನ್ ಗುರುತಿಸಿದ್ದು ತೀವ್ರ ನಿಗಾ ವಹಿಸಿಲಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version