ದಿನದ ಸುದ್ದಿ
ದಾವಣಗೆರೆ | ಗರ್ಭಿಣಿಗೆ ಕೊರೋನಾ : ಮದುವೆಗೆ ಹೋದವರ ಎದೆಯಲ್ಲೀಗ ಡವ ಡವ..!
ಸುದ್ದಿದಿನ,ದಾವಣಗೆರೆ:ಬೆಣ್ಣೆ ನಗರಿಯಲ್ಲಿ ಕೊರೋನಾ ಆರ್ಭಟನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ ಇಷ್ಟು ದಿನ ನರ್ಸ್ ಹಾಗೂ ಮೃತ ವೃದ್ದನ ಕಂಟಕವಿದ್ದು.ಅದಾದ ನಂತರ ಕಂಟೈನ್ಮೆಂಟ್ ವಲಯಗಳೇ ದೊಡ್ಡ ಕಂಟಕವಾಗಿತ್ತು. ಯಾರ ಸಂಪರ್ಕದಿಂದ ಬಂದಿದೆ ಎಂದು ಗೊತ್ತಾಗದೆ ನೂರಾರು ಪಾಸಿಟಿವ್ ಪ್ರಕಣಗಳು ಬರುತ್ತಿತ್ತು.ಈಗ ಮತ್ತೊಂದು ಕಂಟಕ ಎದುರಾಗುತ್ತಿದೆ.
ಈ ಕಂಟಕದಿಂದ ಪಾರಾಗಲು ಆರೋಗ್ಯ ಇಲಾಖೆ ಹಾಗೂ ಜಿಲ್ಲಾಡಳಿತ ಹರ ಸಾಹಸ ಪಡುತ್ತಿದ್ದಾರೆ.. ಹಾಗಾದ್ರೆ ಯಾವುದು ಆ ಕಂಟಕದ ಅಂತೀರಾ ಈ ಸ್ಟೋರಿ ನೋಡಿ…
ಮಧ್ಯ ಕರ್ನಾಟಕ ದಾವಣಗೆರೆಯಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ… ಪೇಷಂಟ್ ನಂಬರ್ 533 ಸೋಂಕಿತ ಸ್ಟಾಪ್ ನರ್ಸ್ ಹಾಗೂ ಪೇಷಂಟ್ ನಂಬರ್ 556 ಮೃತ ವೃದ್ದನಿಂದ ಸಾಕಷ್ಟು ಜನರಿಗೆ ಸೋಂಕು ಕಾಣಿಸಿಕೊಂಡಿದ್ದು, ಇನ್ನೇನು ಕರೋನಾ ಕಂಟಕ ಬೆಣ್ಣೆ ನಗರಿಗೆ ಕಡಿಮೆಯಾಗುತ್ತದೆ ಎಂದುಕೊಂಡುನಿಟ್ಟುಸಿರು ಬಿಟ್ಟರೆ, ಈಗ ಗರ್ಭಿಣಿಯರಿಗೆ ಕೊರೋನಾ ಕಂಟಕ ಶುರುವಾಗಿದೆ.
ಇದುವರೆಗೂ ಆರು ಜನ ಗರ್ಭಿಣಿಯರಿಗೆ ಸೋಂಕು ಕಾಣಿಸಿಕೊಂಡಿದ್ದು, ಅದರಲ್ಲಿ ಮೂರುಜನ ಗರ್ಭಿಣಿಯರಿಗೆ ಹೆರಿಗೆ ಕೂಡ ಆಗಿದೆ… ಅದರೆ ಹರಿಹರದ ರಾಜನಹಳ್ಳಿಯ 18 ವರ್ಷದ ಪೇಷಂಟ್ ನಂಬರ್ 8065 ಸೋಂಕಿತ ಗರ್ಭಿಣಿ ಈಗ ಜಿಲ್ಲಾಡಳಿತಕ್ಕೆ ಹಾಗೂ ಆರೋಗ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.
ಸರ್ಕಾರದಿಂದ ಗರ್ಭಿಣಿಯರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಬೇಕು ಎನ್ನುವ ಅದೇಶದ ಹಿನ್ನಲೆ ಜಿಲ್ಲೆಯಲ್ಲಿ ಇರುವ ಗರ್ಭಿಣಿಯರನ್ನು ತಪಾಸಣೆಗೆ ಓಳಪಡಿಸಿದ್ದು, ಆಗ ಆರು ಗರ್ಭಿಣಿಯರಿಗೆ ಸೋಂಕು ಕಾಣಿಸಿಕೊಂಡಿರುವುದು ವರದಿಯಾಗಿದೆ, ಇದರಲ್ಲಿ ರಾಜನಹಳ್ಳಿ ಗ್ರಾಮದ 18 ವರ್ಷದ ಗರ್ಭಿಣಿ ಕೂಡ ಒಬ್ಬಳಾಗಿದ್ದಾಳೆ.
ಪ್ರಮುಖಖಾಂಶ
- 18 ವರ್ಷದ ಗರ್ಭಿಣೆಗೆ ಸೋಂಕು
- ಆಕೆಯಿಂದ ಒಂದೇ ಕುಟುಂಭದ 9 ಜನರಿಗೆ ಸೋಂಕು
- 15 ರಂದು ಮದುವೆಗೆ ಹೋಗಿದ್ದಳು, 18 ರಂದು ಸೋಂಕು
- ಮದುವೆಗೆ ಹೋದವರ ಎದೆಯಲ್ಲಿ ಈಗ ಡವ ಡವ
ಜಿಲ್ಲಾಡಳಿತಕ್ಕೆ 6 ಜನ ಗರ್ಭಿಣಿಯರ ಪೈಕಿ ಪೇಷಂಟ್ ನಂಬರ್ 8065, 18 ವರ್ಷದ ಗರ್ಭಿಣಿಯ ಕೇಸ್ ತಲೆನೋವಾಗಿ ಪರಿಣಮಿಸಿದೆ… ಹರಿಹರದ ಗಂಡನ ಮನೆಯಿಂದ ತನ್ನ ತವರೂರಾದ ರಾಜನಹಳ್ಳಿ ಗೆ ಹೋಗಿದ್ದಳು, ಗ್ರಾಮದಲ್ಲಿ ನಡೆದ ಸಂಬಂಧಿಕರ ಮದುವೆಗೆ ಈ ಗರ್ಭಿಣಿ ಪಾಲ್ಗೊಂಡಿದ್ದಳು.
15 ರಂದು ಮದುವೆಗೆ ಹೋಗಿ ಬಂದಿದ್ದು 18 ರಂದು ಈಕೆಗೆ ಕೊರೋನಾ ಸೋಂಕು ಪತ್ತೆಯಾಗಿದ್ದು, ಈಗ ಈಕೆಯ ಸಂಪರ್ಕದಲ್ಲಿ ಇದ್ದು ನಾಲ್ಕು ಜನ ಬಾಲಕಿಯರನ್ನು ಸೇರಿ ಒಟ್ಟು 9 ಜನರಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ.ಅಲ್ಲದೆ ಈಕೆಯ ಸಂಪರ್ಕದಲ್ಲಿ ಇದ್ದ 25 ಜನರನ್ನು ಕ್ವಾರಂಟೈನ್ ನಲ್ಲಿ ಇಟ್ಟಿದ್ದಾರೆ. ಆದರೆ ಈಕೆ ಮದುವೆಗೆ ಹೋಗಿ ಬಂದ ಹಿನ್ನಲೆ ಮದುವೆಗೆ ಯಾರ್ ಯಾರ್ ಹೋಗಿದ್ದಾರೋ ಅವರ ಎದೆಯಲ್ಲಿ ಮಾತ್ರ ಡವ ಡವ ಶುರುವಾಗಿದೆ.
ಯಾಕಂದ್ರೆ ನೂರಾರು ಜನರು ಸೇರಿದ ಮದುವೆಯಲ್ಲಿ ಈಕೆಯ ಸಂಪರ್ಕ ಎಷ್ಟು ಜನ ಇದ್ದರು ಎನ್ನುವುದೇ ಆರೋಗ್ಯ ಇಲಾಖೆಗೆ ತಲೆನೋವಾಗಿದೆ.ಅಲ್ದೆ ತಹಶಿಲ್ದಾರರ ಗೆ ಆರೋಗ್ಯ ಇಲಾಖೆ ಮನವಿ ಮಾಡಿಕೊಂಡಿದ್ದು, ಮದುವೆಗೆ ಹೋದವರು ಸ್ವಯಂ ಪ್ರೇರಣೆಯಿಂದ ಬಂದು ತಪಾಸಣೆ ಮಾಡಿಸಿಕೊಳ್ಳಿ ಎಂದು ಅದೇಶವನ್ನು ಹೊರಡಿಸಲಾಗುತ್ತಿದೆ.
- ಒಟ್ಟಾರೆಯಾಗಿ 18 ವರ್ಷದ ಗರ್ಭಿಣಿ ಗೆ ಸೋಂಕು ತಗುಲಿದ್ದು ಗ್ರಾಮದ ಹಾಗೂ ಮದುವಗೆ ಹೋಗಿ ಬಂದವರ ನೆಮ್ಮದಿ ಹಾಳು ಮಾಡಿರುವುದಂತು ಸತ್ಯ.. ಈಗಲೇ ಆಕೆಯ ಸಂಪರ್ಕದಲ್ಲಿ ಇದ್ದ ಗಂಡನ ಮನೆ ಹಾಗೂ ತವರು ಮನೆಯ 9 ಜನರಿಗೆ ಸೋಂಕು ತಗುಲಿದ್ದು, ಮುಂದೆ ಇನ್ನೇಷ್ಟು ಜನ ಸೋಂಕಿತರು ಹೆಚ್ಚಾಗುತ್ತಾರೋ ಎನ್ನುವುದು ಕಾದು ನೋಡಬೇಕಿದೆ.
|ರಾಘವನ್, ಸರ್ವೇಕ್ಷಣಾ ಅಧಿಕಾರಿ
ಸುದ್ದಿದಿನ.ಕಾಂ|ವಾಟ್ಸಾಪ್|9980346243