ದಿನದ ಸುದ್ದಿ

ದಾವಣಗೆರೆ | 4 ಹೊಸ ಪ್ರಕರಣ : ಒಟ್ಟು 104 ಜನರ ಬಿಡುಗಡೆ

Published

on

ಸುದ್ದಿದಿನ,ದಾವಣಗೆರೆ : ಇಂದು ದಾವಣಗೆರೆಯಲ್ಲಿ 4 ಕೋವಿಡ್ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಇವರಿಗೆ ಜಿಲ್ಲಾ ಕೋವಿಡ್ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ರೋಗಿ ಸಂಖ್ಯೆ 2818 24 ವರ್ಷದ ಪುರುಷ, ರೋಗಿ ಸಂಖ್ಯೆ 2819 45 ವರ್ಷದ ಮಹಿಳೆ ಇವರು ರೋ.ಸಂಖ್ಯೆ 1483 ರ ಸಂಪರ್ಕಿತರು. ರೋಗಿ ಸಂಖ್ಯೆ 2820 33 ವರ್ಷದ ಮಹಿಳೆ ಇವರು ರೋ.ಸಂಖ್ಯೆ 926 ರ ಸಂಪರ್ಕಿತರು. ರೋಗಿ ಸಂಖ್ಯೆ 2821 35 ವರ್ಷದ ಪುರುಷ ಇವರು ರೋಗಿ ಸಂಖ್ಯೆ 1253 ರ ಸಂಪರ್ಕಿತರಾಗಿದ್ದಾರೆ.

ದಾವಣಗೆರೆ ಜಿಲ್ಲಾ ಕೋವಿಡ್ ನಿಗದಿತ ಆಸ್ಪತ್ರೆಯಿಂದ ಇದುವರೆಗೆ ಗುಣಮುಖರಾದ 104 ಜನರಿಗೆ ಬಿಡುಗಡೆ ಭಾಗ್ಯ ದೊರೆತಿದೆ. ಜಿಲ್ಲೆಯ ಕೋವಿಡ್ ನಿಗದಿತ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ, ಶುಶ್ರೂಷೆ ನೀಡಲಾಗುತ್ತಿದ್ದು, ಸೋಂಕಿತರು ಚೇತರಿಸಿಕೊಂಡು ಗುಣಮುಖರಾಗಿ ಬಿಡುಗಡೆಯಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.

ಇಂದು ಗುಣಮುಖರಾದ ರೋಗಿ ಸಂಖ್ಯೆಗಳಾದ 619, 754, 914, 917, 1061, 1251, 1252, 1253, 1254, 1255, 1309, 1365, 1366, 1367, 1368, 1369, 1370, 1371, 137 ಮತ್ತು 1373 ಇವರು ಆಸ್ಪತ್ರೆಯಿಂದ ಬಿಡುಗಡೆಗೊಂಡರು. ಇವರನ್ನು ಆಸ್ಪತ್ರೆಯ ವೈದ್ಯರು, ವೈದ್ಯಕೀಯ ಸಿಬ್ಬಂದಿಗಳು ಚಪ್ಪಾಳೆ ತಟ್ಟುವ ಮೂಲಕ ಬೀಳ್ಕೊಡುಗೆ ನೀಡಿದರು.

ಜಿಲ್ಲೆಯಲ್ಲಿ ಒಟ್ಟು 150 ಪ್ರಕರಣಗಳ ಪೈಕಿ ಇದುವರೆಗೆ ಒಟ್ಟು 104 ಜನರು ಬಿಡುಗಡೆ ಹೊಂದಿದ್ದಾರೆ. 04 ಸಾವು ಸಂಭವಿಸಿದ್ದು, ಒಟ್ಟು 42 ಸಕ್ರಿಯ ಪ್ರಕರಣಗಳಿವೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version