ದಿನದ ಸುದ್ದಿ

ದಾವಣಗೆರೆ | ಅತ್ತೆ ಕೊಲೆ ; ಅಳಿಯನಿಗೆ ಜೀವಾವಧಿ ಶಿಕ್ಷೆ

Published

on

ಸುದ್ದಿದಿನ,ದಾವಣಗೆರೆ: ಆಸ್ತಿಯ ವಿಚಾರವಾಗಿ ಜಗಳವಾಡಿ ಅಳಿಯ ಅತ್ತೆಯನ್ನು ಕೊಲೆ ಮಾಡಿದ್ದ. ಈಗ ಆತನಿಗೆ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ 10 ಸಾವಿರ ದಂಡವನ್ನು ವಿಧಿಸಿ ತೀರ್ಪು ನೀಡಿದೆ.

ದಾವಣಗೆರೆ ನಗರದ ಹೊಂಡದ ಸರ್ಕಲ್‍ ಬಳಿಯ ವಾಸಿ ಅಭಿರಾಜ್ ಎಂಬಾತ ಶಿಕ್ಷೆಗೆ ಒಳಗಾದ ಯುವಕ. ಅತ್ತೆ ಭಾಗ್ಯಮ್ಮ ಎಂಬಾಕೆ ಕೊಲೆಯಾಗಿದ್ದ ಮಹಿಳೆ. 2019 ರ ಜುಲೈ 18 ರಂದು ಭಾಗ್ಯಮ್ಮಳನ್ನು ಆಸ್ತಿಯ ಆಸೆಗೆ ಅಭಿರಾಜ್ ಕೊಲೆ ಮಾಡಿದ್ದನು. ಈ ಪ್ರಕರಣ ಇಷ್ಟು ವರ್ಷದ ತನಕ ನ್ಯಾಯಾಲಯದ ಮುಂದೆ ಇತ್ತು. ಅಭಿರಾಜ್‍ಗೆ ನ್ಯಾಯಾಲಯ ಈಗ ಜೀವಾವಧಿ ಶಿಕ್ಷೆ ಕೊಟ್ಟಿದೆ.

ಕೊಲೆ ಹಿನ್ನೆಲೆ

ಅತ್ತೆ ಭಾಗ್ಯಮ್ಮ ಮನೆಗೆ ಬೇರೆ-ಬೇರೆ ಗಂಡಸರು ಬಂದು ಹೋಗುತ್ತಿದ್ದಾರೆ ಎಂದು ಅಭಿರಾಜ್ ಆಕೆಯ ತಾಯಿ ಹಾಗೂ ಅಣ್ಣನಿಗೆ ಚಾಡಿ ಹೇಳುತ್ತಿದ್ದ. 2019ರ ಜುಲೈ 18 ರಂದು ರಾತ್ರಿ ಅಭಿರಾಜ್ ಮನೆಗೆ ಬಂದಾಗ ತನ್ನ ಬಗ್ಗೆ ಚಾಡಿ ಹೇಳುತ್ತಿರುವುದನ್ನು ಭಾಗ್ಯಮ್ಮ ಪ್ರಶ್ನಿಸಿದ್ದಕ್ಕೆ ಅಭಿರಾಜ್ ಮಚ್ಚಿನಿಂದ ಅವರನ್ನು ಕೊಲೆ ಮಾಡಿದ್ದ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version