ದಿನದ ಸುದ್ದಿ
ದಾವಣಗೆರೆ | 07 ಕೇಂದ್ರಗಳಲ್ಲಿ ಕೊವ್ಯಾಕ್ಸಿನ್ 2ನೇ ಡೋಸ್ ಲಸಿಕೆ
ಸುದ್ದಿದಿನ,ದಾವಣಗೆರೆ : ದಾವಣಗೆರೆಯ ಚಿಗಟೇರಿ ಜಿಲ್ಲಾ ಆಸ್ಪತ್ರೆ ಸೇರಿದಂತೆ ಜಿಲ್ಲೆಯ ಒಟ್ಟು 07 ಲಸಿಕಾ ಕೇಂದ್ರಗಳಲ್ಲಿ ಕೋವ್ಯಾಕ್ಸಿನ್ 2ನೇ ಡೋಸ್ ಲಸಿಕೆಯನ್ನು ನೀಡಲಾಗುವುದು ಎಂದು ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ. ಮೀನಾಕ್ಷಿ ತಿಳಿಸಿದ್ದಾರೆ.
ಭಾರತ ಸರ್ಕಾರದಿಂದ ಕೋವ್ಯಾಕ್ಸಿನ್ ಲಸಿಕೆ ಸರಬರಾಜಾಗಿದ್ದು, ಜಿಲ್ಲೆಯ ಒಟ್ಟು 07 ಲಸಿಕಾ ಕೇಂದ್ರಗಳಲ್ಲಿ 2ನೇ ಡೋಸ್ ನೀಡಿಕೆಗಾಗಿ ಬಳಸಲಾಗುವುದು. ಅರ್ಹ ಫಲಾನುಭವಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು. ಕೋವ್ಯಾಕ್ಸಿನ್ ಎರಡನೆ ಡೋಸ್ ನೀಡಲಾಗುವ ಲಸಿಕಾ ಕೇಂದ್ರಗಳ ವಿವರ ಇಂತಿದೆ.
ಇದನ್ನೂ ಓದಿ | ದಾವಣಗೆರೆ | 800 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್‍ಗೆ ಸಚಿವ ಭೈರತಿ ಬಸವರಾಜ್ ಚಾಲನೆ
ಹೊನ್ನಾಳಿ ತಾಲ್ಲೂಕು
ಚೀಲೂರು ಪ್ರಾಥಮಿಕ ಆರೋಗ್ಯ ಕೇಂದ್ರ -8088435735, ಹೊನ್ನಾಳಿ ಸಾರ್ವಜನಿಕ ಆಸ್ಪತ್ರೆ-8277481297, ಕ್ಯಾಸಿನಕೆರೆ ಪ್ರಾ.ಆ.ಕೇಂದ್ರ ದೂರವಾಣಿ ಸಂಖ್ಯೆ 9740818974.
ಹರಿಹರ ತಾಲ್ಲೂಕು
ಹೊಳೆಸಿರಿಗೆರೆ ಪ್ರಾ.ಆ,ಕೇಂದ್ರ-8762077752, ಮಲೆಬೆನ್ನೂರು ಸಮುದಾಯ ಆರೋಗ್ಯ ಕೇಂದ್ರ-9341149789.
ದಾವಣಗೆರೆ ತಾಲ್ಲೂಕು
ಚಿಗಟೇರಿ ಜಿಲ್ಲಾ ಆಸ್ಪತ್ರೆ -9972699969, ತೋಳಹುಣಸೆ ಪ್ರಾ.ಆ.ಕೇಂದ್ರ -9611213130 ಕ್ಕೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243