ದಿನದ ಸುದ್ದಿ

ದಾವಣಗೆರೆ ಕೋವಿಡ್-19 | ಒಟ್ಟು 84 ಜನ ಬಿಡುಗಡೆ

Published

on

ಸುದ್ದಿದಿನ,ದಾವಣಗೆರೆ : ದಾವಣಗೆರೆಯಲ್ಲಿ ಇಂದು ಒಟ್ಟು 4 ಜನರಿಗೆ ಕೊರೊನಾ ಸೋಂಕು ಇರುವುದು ವರದಿಯಾಗಿದ್ದು ಇವರಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹಾಗೂ ಇಂದು ಗುಣಮುಖರಾದ ಐವರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ.

ರೋಗಿ ಸಂಖ್ಯೆ 2557 65 ವರ್ಷದ ಮಹಿಳೆ ಹಾಗೂ ರೋಗಿ ಸಂಖ್ಯೆ 2558 68 ವರ್ಷದ ಮಹಿಳೆ ಇವರಿಬ್ಬರು ರೋಗಿ ಸಂಖ್ಯೆ 2208 ಇವರ ಸಂಪರ್ಕಿತರಾಗಿದ್ದಾರೆ. ರೋಗಿ ಸಂಖ್ಯೆ 2559 8 ವರ್ಷದ ಬಾಲಕ 992 ಇವರ ಸಂಪರ್ಕಿತರಾಗಿದ್ದಾರೆ. ರೋಗಿ ಸಂಖ್ಯೆ 2560 68 ವರ್ಷದ ಮಹಿಳೆ ಶೀತ ಜ್ವರದ(ಇನ್‍ಫ್ಲುಯೆಂಜಾ ಲೈಕ್ ಇಲ್‍ನೆಸ್) ಹಿನ್ನೆಲೆ ಹೊಂದಿದ ಪ್ರಕರಣವಾಗಿದೆ.

ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದ ರೋಗಿ ಸಂಖ್ಯೆ 960, 1250, 1292, 1247 ಮತ್ತು 1378 ಈ ಐವರು ಇಂದು ಆಸ್ಪತ್ರೆಯಿಂದ ಬಿಡುಗಡೆಗೊಂಡರು. ಜಿಲ್ಲೆಯಲ್ಲಿ ಒಟ್ಟು 146 ಪ್ರಕರಣಗಳ ಪೈಕಿ 84 ಜನರು ಬಿಡುಗಡೆ ಹೊಂದಿದ್ದಾರೆ. 58 ಸಕ್ರಿಯ ಪ್ರಕರಣಗಳಿವೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version