ದಿನದ ಸುದ್ದಿ
ದಾವಣಗೆರೆ ಕೋವಿಡ್ – 19 : ಇನ್ನು ಎಷ್ಟು ಜನರ ವರದಿ ಬಾಕಿ ಇದೆ ಗೊತ್ತಾ..!?
ಸುದ್ದಿದಿನ, ದಾವಣಗೆರೆ : ನಗರದ ಕಂಟೋನ್ಮೆಂಟ್ ಜೋನ್ ಗಳಲ್ಲಿ ಸರ್ವೆ ನಡೆಯುತ್ತಿದ್ದು ಜ್ವರ ಪ್ರಕರಣ ಕಂಡು ಬಂದಲ್ಲಿ ಗಂಟಲು ಧ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸುವ ಕೆಲಸವನ್ನು ಆರೋಗ್ಯ ಇಲಾಖೆಯು ಮಾಡುತ್ತಿದೆ.
ಭಾನುವಾರ 393 ಜನರ ಸ್ಲ್ಯಾಬ್ ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಒಟ್ಟು 1489 ಮಾದರಿಗಳ ಫಲಿತಾಂಶ ಬರುವುದು ಬಾಕಿಯಿದೆ. ಈವರೆಗೂ ಒಟ್ಟು 3643 ಮಂದಿಯನ್ನು ಜಿಲ್ಲೆಯಲ್ಲಿ ಕೊರೊನಾ ಟೆಸ್ಟ್ ಗೆ ಒಳಪಡಿಸಲಾಗಿದೆ. 89 ಪಾಸಿಟಿವ್ ಪ್ರಕರಣ ಕಂಡು ಬಂದಿದ್ದು ಇದರಲ್ಲಿ ವಿದೇಶದಿಂದ ಬಂದಿದ್ದ ಇಬ್ಬರು ಗುಣಮುಖರಾಗಿದ್ದಾರೆ. ನಾಲ್ವರು ಮೃತ ಪಟ್ಟಿದ್ದು 83 ಆ್ಯಕ್ಟೀವ್ ಕೇಸ್ ಗಳಿವೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243