ದಿನದ ಸುದ್ದಿ
ದಾವಣಗೆರೆ | ಮೃತ ವೃದ್ದನಿಂದ 9 ಜನಕ್ಕೆ ಕೊರೋನಾ ಪಾಸಿಟಿವ್, ಒಟ್ಟು ಇಂದು 19 ಕೇಸ್ ಪತ್ತೆ
ಸುದ್ದಿದಿನ,ದಾವಣಗೆರೆ : ಮಂಗಳವಾರದ ಕೊರೋನಾ ವೈರಸ್ ವರದಿ ಬಂದಿದ್ದು 19 ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾಗಿವೆ. ಜಾಲಿನಗರ, ಭಾಷಾ ನಗರದಲ್ಲಿ ಅತೀ ಹೆಚ್ಚು ಪ್ರಕರಣ ಧೃಡಪಟ್ಟಿವೆ.
ನಗರದಲ್ಲಿ ಮಂಗಳವಾರದ ವರದಿಯಂತೆ ,19 ಕೇಸ್ ಗಳು ಸೇರಿದಂದೆ ಒಟ್ಟು 109 ಪಾಸಿಟಿವ್ ಕೇಸ್ ದಾಖಲಾಗಿವೆ. ಪೆ.ನಂ 976 ಬೆಳ್ಳುಳ್ಳಿ ವ್ಯಾಪಾರಿಯಿಂದ ನಾಲ್ಕು ಜನರಿಗೆ ಸೋಂಕು ತಗುಲಿದ್ದು, ಪೆ.ನಂ 556 ಮೃತ ವೃದ್ದನ ದ್ವಿತೀಯ ಸಂಪರ್ಕ ಸೋಂಕಿತನಿಂದ 09 ಜನರಿಗೆ ಸೋಂಕು ತಗುಲಿದೆ.
ಇನ್ನು ನರ್ಸ್ ನ ಸಂಪರ್ಕದಲ್ಲಿ ಇದ್ದ ಸೋಂಕಿತರಿಂದ ಒಬ್ಬರಿಗೆ ಸೋಂಕು ತಗುಲಿದ್ದು, ಐಎಲ್ಐ ಸೊಂಕಿತರಿಂದ ಒಬ್ಬರಿಗೆ ಸೋಂಕು ಪ್ರಕರಣ ಪತ್ತೆಯಾಗಿದೆ. ನಂತರದಲ್ಲಿ
ಗುಜರಾತಿನ ಅಹಮದಾಬಾದ್ ನಿಂದ ಬಂದ ಇಬ್ಬರು ಪುರುಷರಿಗೆ ಸೋಂಕು ಹಾಗೂ ಕೇರಳದಿಂದ ಬಂದ ಮಹಿಳೆಗೆ ಸೋಂಕು ಪತ್ತೆಯಾಗಿದೆ. ಒಟ್ಟಾರೆ ದಾವಣಗೆರೆ ಜಿಲ್ಲೆಯಲ್ಲಿ 109 ಕೊರೋನಾ ಪಾಸಿಟಿವ್ ಕೇಸ್ ದಾಖಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243