ದಿನದ ಸುದ್ದಿ
ದಾವಣಗೆರೆ ಕೋವಿಡ್-19 : ಇನ್ನು ಎಷ್ಟು ಜನರ ವರದಿ ಬರಬೇಕಿದೆ ಗೊತ್ತಾ..?
ಸುದ್ದಿದಿನ,ದಾವಣಗೆರೆ : ನಗರದಲ್ಲಿ ಗುರುವಾರ ಹೊಸದಾಗಿ 3 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಈ ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನು ಪತ್ತೆ ಹಚ್ಚಿ, ಪ್ರತ್ಯೇಕವಾಗಿರಿಸುವ ಹಾಗೂ ಅವರ ಗಂಟಲುದ್ರವ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲು ಕ್ರಮ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.
ಜಿಲ್ಲಾಡಳಿತ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು ರೋಗಿ ಸಂಖ್ಯೆ 960 ಇವರು 40 ವರ್ಷದ ಪುರುಷ ಆಗಿದ್ದು ರೋಗಿ ಸಂಖ್ಯೆ 852 ರ ಮನೆ ಮೇಲೆ ಬಾಡಿಗೆ ಇರುವವರಾಗಿದ್ದಾರೆ. ಇವರ 10 ಜನ ಪ್ರಾಥಮಿಕ ಮತ್ತು 21 ಜನ ದ್ವಿತೀಯ ಸಂಪರ್ಕಿತರನ್ನು ಈಗಾಗಲೇ ಐಸೋಲೇಟ್ ಮಾಡಿ ಸ್ವಾಬ್ ಸಂಗ್ರಹ ಕಾರ್ಯ ನಡೆಯುತ್ತಿದೆ.
ರೋಗಿ ಸಂಖ್ಯೆ 975 ಇವರು 34 ವರ್ಷದ ಪುರುಷ ಆಗಿದ್ದು ಇವರು ಕೆಟಿಜೆ ನಗರ ಕಂಟೈನ್‍ಮೆಂಟ್ ಝೋನ್‍ನಲ್ಲಿ ಕರ್ತವ್ಯ ನಿರ್ವಹಿಸಿದ್ದ ಟ್ರಾಫಿಕ್ ಪೊಲೀಸ್ ಪೇದೆಯಾಗಿದ್ದು ಇವರು ಈಗಾಗಲೇ ಸಾಂಸ್ಥಿಕ ಕ್ವಾರಂಟೈನ್‍ನಲ್ಲಿದ್ದರು. ಇವರ 9 ಜನ ಪ್ರಾಥಮಿಕ ಮತ್ತು 32 ಜನ ದ್ವಿತೀಯ ಸಂಪರ್ಕಿತರನ್ನು ಐಸೋಲೇಷನ್‍ನಲ್ಲಿರಿಸಿ ಇವರ ಸ್ವಾಬ್ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುತ್ತಿದೆ.
ರೈತರ ಬೀದಿ ಕಂಟೈನ್‍ಮೆಂಟ್ ಝೋನ್
ಇನ್ನು ರೋಗಿ ಸಂಖ್ಯೆ 976 ಇವರು 32 ವರ್ಷದ ಪುರುಷ ಆಗಿದ್ದು ಇನ್‍ಫ್ಲುಯೆನ್ಸಾ ಲೈಕ್ ಇಲ್‍ನೆಸ್ ಅಂದರೆ ಶೀತ ಜ್ವರದಂತಹ ಪ್ರಕರಣದವರಾಗಿದ್ದು ಇವರು ಈ ಹಿಂದೆ ಚಿಕನ್ ಬಿರಿಯಾನಿ ಅಂಗಡಿ ನಡೆಸುತ್ತಿದ್ದರು. ಈಗ ಕೆಲವು ದಿನಗಳಿಂದ ನಗರದ ಎಂಬಿಆರ್ ಟ್ರೇಡರ್ಸ್ ಇವರಿಂದ ಬೆಳ್ಳುಳ್ಳಿ ಮತ್ತು ಈರುಳ್ಳಿಯನ್ನು ಖರೀದಿಸಿ ತಳ್ಳುಗಾಡಿಯಲ್ಲಿ ಹೈಸ್ಕೂಲ್ ಮೈದಾನದ ಸುತ್ತಮುತ್ತ ಮತ್ತು ವಿನಾಯಕ ಮೆಡಿಕಲ್ಸ್ ಸುತ್ತಮುತ್ತ ಮಾರಾಟ ಮಾಡುತ್ತಿದ್ದರೆಂದು ಹೇಳಿರುತ್ತಾರೆ. ಇವರ ಮನೆ ಪಿಜೆ ಬಡಾವಣೆಯ ರೈತರ ಬೀದಿಯಲ್ಲಿದ್ದು ರೈತರ ಬೀದಿಯನ್ನು ಕಂಟೈನ್‍ಮೆಂಟ್ ಝೋನ್ ಮಾಡಲು ಈಗಾಗಲೇ ಸರ್ವೇ ಮಾಡಲಾಗಿದೆ. ಇವರಿಗೆ 8 ಜನ ಪ್ರಾಥಮಿಕ ಮತ್ತು 16 ಜನ ದ್ವಿತೀಯ ಸಂಪರ್ಕಿತರನ್ನು ಗುರುತಿಸಿ ಐಸೋಲೇಟ್ ಮಾಡಿ ಸ್ವಾಬ್ ಸಂಗ್ರಹಿಸಲಾಗುತ್ತಿದೆ ಎಂದರು.
ವರದಿ ಬಾಕಿ 545
ಜಿಲ್ಲೆಯಲ್ಲಿ ಈವರೆಗೆ ಒಟ್ಟು 88 ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದ್ದು 2 ಗುಣಮುಖ, 4 ಸಾವು ಸಂಭಿಸಿದ್ದು 82 ಸಕ್ರಿಯ ಪ್ರಕರಣಗಳಿವೆ. ಇಂದು ಒಟ್ಟು 385 ಸ್ವಾಬ್ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ಈವತ್ತು 160 ನೆಗೆಟಿವ್ ಎಂದು ವರದಿ ಬಂದಿದೆ. ಬಾಕಿ 545 ವರದಿ ಬರಬೇಕಿದ್ದು, ರೋಗಿ ಸಂಖ್ಯೆ 976 ಓಡಾಡಿದ ಬೀದಿ ಬೀದಿಗಳಲ್ಲಿ ಸ್ವಾಬ್ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸುವ ಪ್ರಯತ್ನ ಮಾಡಲಾಗುವುದು ಎಂದರು.
ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾ ಕೋವಿಡ್ ನೋಡಲ್ ಅಧಿಕಾರಿ ಪ್ರಮೋದ್ ನಾಯಕ್, ಡಿಹೆಚ್‍ಓ ಡಾ.ರಾಘವೇಂದ್ರಸ್ವಾಮಿ ಮಾತನಾಡಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243