ದಿನದ ಸುದ್ದಿ
ದಾವಣಗೆರೆ | ಕೋಮು ದ್ವೇಷ ವಿಡಿಯೋ ವೈಲರ್ : ಆರೋಪಿಗಳ ಬಂಧನ
ಸುದ್ದಿದಿನ, ದಾವಣಗೆರೆ : ಕೋಮು ದ್ವೇಷ ಹರಡುವ ವಿಡಿಯೋ ಒಂದು ನಗರದಲ್ಲಿ ಶನಿವಾರ ವೈರಲ್ ಆಗಿತ್ತು. ಈ ಸಂಬಂಧ ಅಶಾಂತಿ ವಾತಾವರಣ ಸೃಷ್ಟಿಯ ಹಿನ್ನೆಲೆಯಲ್ಲಿ ಇಬ್ಬರು ಯುವಕರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಸಯ್ಯದ್ ಮೊಹಮ್ಮದ್ (24, ಫಯಾಜ್ ಅಹ್ಮದ್ (32) ಎಂಬ ಇಬ್ಬರು ಯುವಕರನ್ನು ಕೆಟಿಜೆ ನಗರ ಪಿಎಸ್ ಐ ವೀರೇಶ್ ನೇತೃತ್ವದ ತಂಡ ಬಂಧಿಸಿದೆ.
ಘಟನೆ ವಿವರ
ಕೆಲವು ಮುಸ್ಲಿಂ ಯುವಕರು ದಾವಣಗರೆ ಪಟ್ಟಣದ ಬಿ.ಎಸ್.ಚನ್ನಬಸಪ್ಪ ಅಂಗಡಿಯಲ್ಲಿ ಹೊಸ ಬಟ್ಟೆಗಳನ್ನು ಖರೀದಿಸಿದ ಮಹಿಳೆಯರನ್ನು ತಡೆದು ಅಂಗಡಿಯಿಂದ ಹೊಸ ಬಟ್ಟೆಗಳನ್ನು ಖರೀದಿಸಬಾರದೆಂದು ಹೇಳಿದ್ದರು.
ಮತ್ತು ಆ ವಸ್ತುಗಳನ್ನು ಹಿಂದಿರುಗಿಸುವಂತೆ ಖರೀದಿಸಿದವರಿಗೆ ಒತ್ತಾಯಿಸಿದ ಘಟನೆಯ ವಿಡಿಯೋ ಶನಿವಾರ ವೈರಲ್ ಆಗಿತ್ತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243