ದಿನದ ಸುದ್ದಿ
ದಾವಣಗೆರೆ | ಕೆರೆಗಳ ಒತ್ತುವರಿ ತೆರವು : ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ ಸೂಚನೆ
ಸುದ್ದಿದಿನಡೆಸ್ಕ್: ಜಿಲ್ಲೆಯಲ್ಲಿ 538 ಕೆರೆಗಳಿದ್ದು 23292 ಎಕರೆ ಪ್ರದೇಶ ವಿಸ್ತೀರ್ಣ ಹೊಂದಿರುತ್ತದೆ. ಇದರಲ್ಲಿ 486 ಕೆರೆಗಳ ಅಳತೆ ಮಾಡಿ 16604.22 ಎಕರೆ ವಿಸ್ತೀರ್ಣ ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದ್ದಾರೆ.
ಅವರು ಶನಿವಾರ ಆನಗೋಡು ಬಳಿಯ ಸೈನ್ಸ್ ಭವನದಲ್ಲಿ ನಡೆದ ಜಿಲ್ಲೆಯ ಕಂದಾಯಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಅಳತೆ ಮಾಡಲು 52 ಕೆರೆಗಳಿಂದ 6687.24 ಎಕರೆ ಅಳತೆಗೆ ಬಾಕಿ ಇರುತ್ತದೆ. ಅಳತೆ ಮಾಡಿದ 283 ಕರೆಗಳಲ್ಲಿ 1816.39 ಎಕರೆ ಒತ್ತುವರಿ ಪ್ರದೇಶವೆಂದು ಗುರುತಿಸಿ 37 ಕೆರೆಗಳ 66.38 ಎಕರೆ ವಿಸ್ತೀರ್ಣ ತೆರವು ಮಾಡಲಾಗಿದೆ. ಇನ್ನೂ 246 ಕೆರೆಗಳ 1750 ಎಕರೆ ವಿಸ್ತೀರ್ಣ ತೆರವಿಗೆ ಬಾಕಿ ಇದ್ದು 203 ಕೆರೆಗಳು 14787 ಎಕರೆ ವಿಸ್ತೀರ್ಣದಲ್ಲಿದ್ದು ಯಾವುದೇ ಒತ್ತುವರಿಯಾಗಿರುವುದಿಲ್ಲ. ಒತ್ತುವರಿಯಾದ ಕೆರೆಗಳನ್ನು ಶೀಘ್ರದಲ್ಲಿ ತೆರವು ಮಾಡಲು ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.
538 ಕೆರೆಗಳಲ್ಲಿ 212 ಪಂಚಾಯತ್ ರಾಜ್ ವಿಭಾಗ, 82 ಸಣ್ಣ ನೀರಾವರಿ, 36 ಜಲಸಂಪನ್ಮೂಲ ಇಲಾಖೆ, 2 ಮಹಾನಗರ ಪಾಲಿಕೆ, 144 ಗ್ರಾಮ ಪಂಚಾಯತ್ ಕೆರೆ, 28 ಅರಣ್ಯ, ಕೆಪಿಸಿಎಲ್ 2, ಎಸ್.ಎಸ್.ಎಲ್.ಆರ್.2 ಹಾಗೂ ಇತರೆ 30 ಸೇರಿವೆ.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಉಪವಿಭಾಗಾಧಿಕಾರಿ ದುರ್ಗಶ್ರೀ, ಅಭಿಷೇಕ್, ಆಯಾ ತಾಲ್ಲೂಕಿನ ತಹಶೀಲ್ದಾರರು, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243