ದಿನದ ಸುದ್ದಿ
ದಾವಣಗೆರೆ ಡಿಸಿ ಗೌತಮ್ ಹಾಗೂ ಜಿಪಂ ಸಿಇಒ ಅಶ್ವತಿ ಪ್ರೇಮ ವಿವಾಹ..!
ಸುದ್ದಿದಿನ, ದಾವಣಗೆರೆ : ಕಳೆದ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದ ಐಎಎಸ್ ಅಧಿಕಾರಿಗಳಿಬ್ಬರು ಸಪ್ತಪದಿ ತುಳಿಯಲು ಸಜ್ಜಾಗಿದ್ದಾರೆ.
ದಾವಣಗೆರೆಯ ಜಿಪಂ ಸಿಇಒ ಎಸ್.ಅಶ್ವತಿಯವರು ರಾಜ್ಯದಲ್ಲಿ ಶೌಚಾಲಯ ನಿರ್ಮಾಣದ ಮೂಲಕ ಕ್ರಾಂತಿಯನ್ನೇ ಮಾಡಿದ್ದ ಇವರು ದಾವಣಗೆರೆಯ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರು ಫೆ.14 ಪ್ರೇಮಿಗಳ ದಿನದಂದು ಕೇರಳದ ಕಲ್ಲಿಕೋಟೆಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡ ಲಿದ್ದಾರೆ.
ಸಿಇಒ ಅಶ್ವತಿಯವರು ಜನಸ್ನೇಹಿ ಅಧಿಕಾರಿಯೆಂದೇ ಹೆಸರು ಮಾಡಿದ್ದಾರೆ. ಇವರು ಕಳೆದ ಮೂರು ತಿಂಗಳಿನಿಂದ ಅಧಿಕಾರಿಯೊಬ್ಬರನ್ನು ಮದುವೆಯಾಗಲಿದ್ದಾರೆ ಎಂದು ಸುದ್ದಿ ಹರಡಿತ್ತು. ಆದರೆ ಆ ಅಧಿಕಾರಿಯಾರು ಎಂಬ ಬಗ್ಗೆ ಖಚಿತ ಮಾಹಿತಿಯಿರಲಿಲ್ಲ. ಈಗ ಇವರಿಬ್ಬರೂ ಮದುವೆಗೆ ಸಜ್ಜಾಗಿರುವುದು ದಾವಣಗೆರೆಯ ಜನತೆಗೆ ಖುಷಿತಂದಿದೆ. ಕಲ್ಲಿಕೋಟೆಯ ಮೂಲದವರಾದ ಸಿ.ಎಸ್.ಅಶ್ವತಿಯವರು, ವಿಶಾಖಪಟ್ಟಣದ ಮೂಲದವರಾದ ಬಗಾದಿ ಗೌತಮ್ ಅವರನ್ನು ವರಿಸಲಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|99861715401