ದಿನದ ಸುದ್ದಿ
ದಾವಣಗೆರೆ | ಆದಷ್ಟು ಬೇಗ ಎಲ್ಲಾ ಸೋಂಕಿತರು ಗುಣಮುಖರಾಗುವ ವಿಶ್ವಾಸವಿದೆ : ಜಿಲ್ಲಾಧಿಕಾರಿ
ಸುದ್ದಿದಿನ, ದಾವಣಗೆರೆ : ಆದಷ್ಟು ಬೇಗ ಎಲ್ಲರೂ ಗುಣಮುಖರಾಗುವ ವಿಶ್ವಾಸ ಇದೆ. ಅವರನ್ನು ಕೂಡ ಪ್ರೋಟೊಕಾಲ್ ಪ್ರಕಾರ ಒಳ್ಳೆಯ ಚಿಕಿತ್ಸೆ ನೀಡಿ, ಅವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿ ಆದಷ್ಟು ಬೇಗ ಗುಣಮುಖರಾನ್ನಾಗಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು
ಶುಕ್ರವಾರ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಗುಣಮುಖರಾದ ಕೊರೊನಾ ಸೋಂಕಿತರಿಗೆ ಬೀಳ್ಕೊಡುಗೆ ನೀಡಿದ ಸಂಧರ್ಭದಲ್ಲಿ ಅವರು ಮಾತನಾಡಿದರು.
14 ದಿನ ಮುಗಿದವರದ್ದು ಸ್ಯಾಂಪಲ್ ಮರು ಸಂಗ್ರಹಿಸಿ ಕಳುಹಿಸಿದ್ದು, ಒಂದಿಷ್ಟು ಜನರ ವರದಿ ಬಂದಿದೆ. ಕೆಲವರನ್ನು ಶನಿವಾರ ಕಳುಹಿಸುವ ಕ್ರಮ ಕೈಗೊಳ್ಳಲಾಗುವುದು ಎಂದರು.
ಯಾರೊಬ್ಬರೂ ಭಯ ಪಡಬೇಕಿಲ್ಲ. ಪ್ರತಿಯೊಬ್ಬರು ಎಸ್‍ಎಂಎಸ್ ಎನ್ನುವ ಮಾರ್ಗ ಅನುಸರಿಸುವುದರೊಂದಿಗೆ ನೆನಪಿಟ್ಟುಕೊಳ್ಳಬೇಕು. ಸ್ಯಾನಿಟೈಸರ್, ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಂಡು ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು. ಜೊತೆಗೆ ಕಂಟೈನ್‍ಮೆಂಟ್ ಜೋನ್ ಒಳಗೆ ಹೋಗುವವರು ಎಚ್ಚರಿಕೆಯಿಂದ ಇರಬೇಕು ಎಂದು ಸೂಚಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243