ದಿನದ ಸುದ್ದಿ

ದಾವಣಗೆರೆ ಡಿಸಿಬಿ ಪೊಲೀಸರ ಕಾರ್ಯಾಚರಣೆ| ಅಪ್ರಾಪ್ತೆಯರನ್ನ ಅಪಹರಿಸಿ ವೇಶ್ಯಾವಾಟಿಕೆಗೆ ತಳ್ಳುತ್ತಿದ್ದ ಜಾಲ ಪತ್ತೆ

Published

on

ಸುದ್ದಿದಿನ, ದಾವಣಗೆರೆ | ದಾವಣಗೆರೆ, ಗದಗ ಸೇರಿದಂತೆ ಬಹುತೇಕ ಕಡೆ ವೇಶ್ಯಾವಾಟಿಕೆ ನಡೆಸುತ್ತಿದ್ದ ಮೂರು ಜನ ಮಹಿಳೆಯರನ್ನು ನಗರದ ಡಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಗೀತಕ್ಕ(33) ಅನಿತಾ ಅಲಿಯಾಸ್ ಕಾವ್ಯಾ (34) ಹಾಗೂ ರೂಪಾ (28) ಬಂಧಿತ ಮಹಿಳೆಯರು.
ಬಸ್ ಹಾಗೂ ರೇಲ್ವೆ ನಿಲ್ದಾಣದಲ್ಲಿ ಅಮಾಯಕ ಬಾಲಕಿಯರನ್ನ ಕರೆದುಕೊಂಡು ಹೋಗಿ ವೇಶ್ಯಾವಾಟಿಕೆಗೆ ತಳ್ಳುತ್ತಿದ್ದ ಈ ಮಹಿಳೆಯರಿಂದ
ಓರ್ವ ಬಾಲಕಿಯನ್ನು ಪೊಲೀಸರು ರಕ್ಷಿಸಿದ್ದಾರೆ.

ಬಂಧಿತ ಮೂರು ಮಹಿಳೆಯರು ದಾವಣಗೆರೆ ಜಿಲ್ಲೆ ಮೂಲದವರಾಗಿದ್ದು, ಪ್ರಮುಖ ಆರೋಪಿ ಶಿವು ಸೇರಿ ಇಬ್ಬರು ಆರೋಪಿಗಳ ಬಂಧನಕ್ಕೆ ಜಾಲ ಬಿಸಿದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಹಿಂದೆ ಕೂಡಾ ಈ ಮಹಿಳೆರು ಬಾಲಕಿಯರನ್ನ ಅಪಹರಿಸಿ ಪೊಲೀಸರಿಗೆ ಸಿಕ್ಕು ಬಿದ್ದಿದ್ದರು. ಜಾಮೀನು ಮೇಲೆ ಹೊರ ಬಂದು ಅದೇ ದಂಧೆ ಶುರು ಮಾಡಿದ್ದ ಮಹಿಳೆಯರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version