ದಿನದ ಸುದ್ದಿ

ದಾವಣಗೆರೆ ಡಿಸಿಸಿ ಬ್ಯಾಂಕ್ ನೇಮಕಾತಿ ಗೋಲ್ ಮಾಲ್: ಸಿಎಂಗೆ ಮಾಜಿ ಶಾಸಕ ಶಿವಶಂಕರ್ ಪತ್ರ

Published

on

ಎನ್. ಆರ್.ಗೋವರ್ಧನ, ದಾವಣಗೆರೆ: 

ದಾವಣಗೆರೆ ಡಿಸಿಸಿಬಿಯಲ್ಲಿ ಖಾಲಿ 31 ಹುದ್ದೆಗಳಿಗೆ ನಡೆಸಿದ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮವಾಗಿದ್ದು, ಸರ್ಕಾರ ಕೂಡಲೇ ಅದಕ್ಕೆ ತಡೆ ನೀಡಬೇಕು ಎಂದು ಹರಿಹರ ಕ್ಷೇತ್ರದ ಮಾಜಿ ಶಾಸಕ ಎಚ್.ಎಸ್.ಶಿವಕುಮಾರ್ ಸಿಎಂ ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿದ್ದಾರೆ.

ದಾವಣಗೆರೆ ಡಿಸ್ಟ್ರಿಕ್ಟ್ ಕೋ-ಆಪರೇಟಿವ್ ಬ್ಯಾಂಕ್ ನಲ್ಲಿ ಸರ್ಕಾರದ ನಿಯಮಾವಳಿ ಉಲ್ಲಂಘಿಸಿ ನೇಮಕಾತಿ ನಡೆದಿದ್ದು, ಅರ್ಹರಿಗೆ ಅನ್ಯಾಯವಾಗಿದೆ. ಕೇವಲ 10 ದಿನದೊಳಗೆ ನೇಮಕಾತಿ ಪ್ರಕ್ರಿಯೆ ಮುಗಿಸಲಾಗಿದೆ. ಪ್ರತಿ ಹುದ್ದೆಗೆ ಲಕ್ಷಾಂತರ ರೂಪಾಯಿ ಲಂಚ ಪಡೆದ ಆರೋಪ ಕೇಳಿ ಬರುತ್ತಿವೆ.

ಮಾಜಿ ಶಾಸಕ ಎಚ್.ಎಸ್.ಶಿವಕುಮಾರ್ ಅವರು ಬರೆದ ಪತ್ರದಲ್ಲಿ ಏನಿದೆ:

  • 1. ಸರ್ಕಾರಿ ಮತ್ತು ಸಹಕಾರಿ ಇಲಾಖೆಯ ನಿಯಮ ಉಲ್ಲಂಘನೆ ಮಾಡಲಾಗಿದೆ. ಬ್ಯಾಂಕಿನ ನೌಕರರ ನೇಮಕಾತಿ ಸಂಬಂಧಿಸಿದಂತೆ ಆಡಳಿತ ಮಂಡಳಿ ಸಭೆ ನಡೆಸದೇ ವಿಷಯ ಮಂಡಿಸದೇ ಬೇರೆ ಹೆಚ್ಚುವರಿ ವಿಷಯದಲ್ಲಿ ತೀರ್ಮಾನ ತೆಗೆದುಕೊಂಡು ಸಹಕಾರ ಸಂಘಗಳ ನಿಯಮ 14 (ಇ) ಯನ್ನು ಉಲ್ಲಂಘಿಸಲಾಗಿದೆ. ಇಂತಹ ವಿಷಯವನ್ನು ಮುಖ್ಯ ವಿಷಯದಲ್ಲಿ ಮಂಡಿಸಿಬೇಕಾಗುತ್ತದೆ.
    2. ಸಹಕಾರ ಸಂಘಗಳ ನಿಬಂಧಕರು ಸದರಿ ಆಡಳಿತ ಮಂಡಳಿ ನಡವಳಿಕೆಗಳನ್ನು ಗಮನಿಸದೇ ಕಡತ ಪರಿಶೀಲನ ಮಾಡದೇ ಏಕಾಏಕಿ ಅನುಮತಿ ನೀಡಲಾಗಿದೆ.
  • 3. ಸಹಕಾರ ಸಂಘಗಳ ನಿಬಂಧಕರು ಸದರಿ ನಿಯೋಜಿತಗೊಂಡಿರುವ ಸಿಇಒ ಇರುವುದಿಲ್ಲ. ಬ್ಯಾಂಕಿನ ಆಡಳಿತ ಮಂಡಳಿಯವರು ಬ್ಯಾಂಕಿನ ಸಿಬ್ಬಂದಿಗೆ ಪ್ರಭಾರ ವಹಿಸಿ ಮನಬಂದಂತೆ ಆಡಳಿತ ನಡೆಸುತ್ತಿದ್ದು, ನಿಯಮ ಉಲ್ಲಂಘಿಸಿದ್ದಾರೆ.
  • 4. ಸದರಿ ವಿಷಯಗಳನ್ನು ತೀರ್ಮಾನಿಸುವ ಸಭೆಗಳಿಗೆ ಸತತವಾಗಿ ಸರ್ಕಾರದ ಪರವಾಗಿ ಸಹಕಾರ ಸಂಘದ ಉಪನಿಬಂಧಕರು ಗೈರಾಗಿದ್ದಾರೆ.
  • 5. ಸಹಕಾರ ಸಂಘದ ನಿಯಮ 18(ಅ) ನಿಯಮದಂತೆ ನೇಮಕಾತಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದವರಿಗೆ ಹುದ್ದೆ ನೀಡಬೇಕು. ಆದರೆ ಕಡಿಮೆ ಅಂಕ ಪಡೆದವರಿಗೆ ನೀಡಲಾಗಿದೆ.

ಹೀಗೆ ಪತ್ರದಲ್ಲಿ ಹಲವು ಅಂಶಗಳನ್ನು ಪಟ್ಟಿ ಮಾಡಿರುವ ಮಾಜಿ ಶಾಸಕ ಎಚ್.ಎಸ್.ಶಿವಕುಮಾರ್ ಈ ಕುರಿತು ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಶೀಘ್ರ ನೇಮಕಕ್ಕೆ ಚುನಾವಣೆ ಕಾರಣ

ದಿಢೀರನೆ ನೇಮಕಾತಿ ಪ್ರಕ್ರಿಯೆ ಕೈಗೊಂಡಿರುವುದಕ್ಕೆ ಸಹಕಾರ ಸಂಘದ ಎಕ್ಸಿಕ್ಯುಟಿವ್ ಸಮಿತಿ ಚುನಾವಣೆ ನಡೆಯಲಿದೆಯಂತೆ. ಐದು ವರ್ಷಗಳ ಹಿಂದೆ ಆಯ್ಕೆಯಾದ ಸಮಿತಿ ಅವಧಿ ಮುಕ್ತಾಯವಾಗುತ್ತಿದ್ದು, ಚುನಾವಣೆ ನಡೆಸಲು ರಾಜ್ಯ ಇಲಾಖೆಯಿಂದ ಪ್ರಕಟಣೆ ಹೊರಡಿಸಲಾಗಿದೆ ಎಂದು ಅಧಿಕೃತ ಮೂಲಗಳಿಂದ ತಿಳಿದುಬಂದಿದೆ.

ಅಕ್ರಮದ ಕುರಿತು ಸುದ್ದಿದಿನ ಬೆಳಕು

ದಾವಣಗೆರೆ ಡಿಸಿಸಿಬಿ‌ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿರುವ ಕುರಿತು ಕೆಲ ಆಕಾಂಕ್ಷಿಗಳು ಆರೋಪಿಸಿದ್ದರು. ಇದರ ಜಾಡುಹಿಡಿದು ಸುದ್ದಿದಿನ ಮೊದಲಿಗೆ ವರದಿ ಪ್ರಕಟಿಸಿತ್ತು. ಆ ನಂತರ ಕೆಲವರು ಅಕ್ರಮ ನಡೆದಿರುವ ಕುರಿತು ದೂರವಾಣಿ ಮೂಲಕ ಆರೋಪಿಸಿದ್ದಾರೆ. ಅಂಗವಿಕಲರೊಬ್ಬರು ಪ್ರಕರಣದ ತನಿಖೆಗೆ ಪಿಎಎಲ್ ಹಾಕಿದ್ದಾರೆ.

ಇದನ್ನು ಓದಿ: ದಾವಣಗೆರೆ ಡಿಸಿಸಿ ಬ್ಯಾಂಕ್ ನೇಮಕಾತಿ ಅಕ್ರಮ..?

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version