ದಿನದ ಸುದ್ದಿ
ದಾವಣಗೆರೆ | ಜಿಲ್ಲಾ ವಿಮಾ ಕಚೇರಿ ಸ್ಥಳಾಂತರ
ಸುದ್ದಿದಿನ,ದಾವಣಗೆರೆ : ಜಿಲ್ಲಾ ವಿಮಾ ಕಚೇರಿ ಕೆಜಿಐಡಿ, ವಸಂತ ರಸ್ತೆ, ನಂ.36 ದಾವಣಗೆರೆಯಲ್ಲಿದ್ದ ಕಟ್ಟಡವು ಶಿಥಿಲಾವಸ್ಥೆಯಲ್ಲಿರುವ ಕಾರಣ ಜೂ.01 ರಿಂದ ಜಿಲ್ಲಾ ವಿಮಾಧಿಕಾರಿಗಳು ಜಿಲ್ಲಾ ವಿಮಾ ಕಚೇರಿ, ಕರ್ನಾಟಕ ಸರ್ಕಾರಿ ವಿಮಾ ಇಲಾಖೆ, ಗಂಗೋತ್ರಿ ಬಿಲ್ಡಿಂಗ್, ಡೋರ್ ನಂ.2972/1 2ಎ ಯಿಂದ 2ಡಿ ಎಂಸಿಸಿ ಬಿ ಬ್ಲಾಕ್, ಮಾಮಾಸ್ ಜಾಯಿಂಟ್ ರೋಡ್, ಪಿನ್‍ಕೋಡ್ 577004 ದಾವಣಗೆರೆ ಇಲ್ಲಿಗೆ ಸ್ಥಳಾಂತರ ಮಾಡಲಾಗುತ್ತಿದ್ದು, ಮುಂದಿನ ಯಾವುದೇ ಕಚೇರಿ ಕೆಲಸ ಕಾರ್ಯಗಳ ಪತ್ರ ವ್ಯವಹಾರವನ್ನು ಮೆಲ್ಕಾಣಿಸಿದ ವಿಳಾಸಕ್ಕೆ ಕಳುಹಿಸಬಹುದಾಗಿದೆ ಎಂದು ಜಿಲ್ಲಾ ವಿಮಾಧಿಕಾರಿ ಕೆ.ಜಿ.ಐ.ಡಿ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243