ದಿನದ ಸುದ್ದಿ

ದಾವಣಗೆರೆ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ; ಭಾರಿ ಮಳೆ ಸಾಧ್ಯತೆ

Published

on

ಸುದ್ದಿದಿನ ದಾವಣಗೆರೆ: ಜಿಲ್ಲೆಯಲ್ಲಿ ಮಂಗಳವಾರ ಸಂಜೆ ತುಂತುರು ಮಳೆಯಾಯಿತು. ಮಂಗಳವಾರ ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಆದರೆ, ಮಧ್ಯಾಹ್ನದ ವರೆಗೂ ಮಳೆಯಾಗುವ ಯಾವುದೇ ಸೂಚನೆ ಇರಲಿಲ್ಲ.

ಹಾಗಾಗಿ ಸಂಜೆ ವರೆಗೂ ಸೆಕೆಯ ವಾತಾವರಣ ನಿರ್ಮಾಣವಿತ್ತು. ಸಂಜೆಯಾಗುತ್ತಲೆ ತುಂತುರು ಮಳೆಯಾಯಿತು. ಸೋಮವಾರವೂ ಸಹ ಮೋಡ ಕವಿದ ವಾತಾವರಣ ಇತ್ತು. ಆದರೆ, ಒಂದು ಹನಿಯೂ ಮಳೆಯಾಗಿರಲಿಲ್ಲ.

Trending

Exit mobile version