ದಿನದ ಸುದ್ದಿ

ದಾವಣಗೆರೆ | ಪ್ರವಾಸಿ ಟ್ಯಾಕ್ಸಿ ಖರೀದಿಸಲು ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ,ದಾವಣಗೆರೆ : ಪ್ರವಾಸೋದ್ಯಮ ಇಲಾಖೆಯಿಂದ 2013-14 ನೇ ಸಾಲಿನಿಂದ 2016-17 ನೇ ಸಾಲಿನವರೆಗೆ ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಯೋಜನೆಯಡಿ ಜಿಲ್ಲೆಯಲ್ಲಿ ಬಾಕಿ ಇರುವ ಪರಿಶಿಷ್ಟ ಜಾತಿ 07 ಹಾಗೂ ಪರಿಶಿಷ್ಟ ಪಂಗಡ 08 ಅಭ್ಯರ್ಥಿಗಳು ಸೇರಿದಂತೆ ಒಟ್ಟು 15 ಪ್ರವಾಸಿ ಟ್ಯಾಕ್ಸಿ ಖರೀದಿಸಲು ತಲಾ 2.00 ಲಕ್ಷ ಸಹಾಯಧನದಲ್ಲಿ ಟ್ಯಾಕ್ಸಿ ಕಲ್ಪಿಸುವ ಸಂಬಂಧ ಅರ್ಜಿ ವಿತರಿಸುವ ದಿನಾಂಕವನ್ನು ಮೇ.20 ರವರೆಗೆ ವಿಸ್ತರಿಸಲಾಗಿದೆ.

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಸಹಾಯಕ ನಿರ್ದೇಶಕರ ಕಚೇರಿ, ಪ್ರವಾಸೋದ್ಯಮ ಇಲಾಖೆ, ಉಪವಿಭಾಗಾಧಿಕಾರಿಗಳ ಕಚೇರಿ ಆವರಣ, ರೈಲ್ವೆ ನಿಲ್ದಾಣದ ಪಕ್ಕ ದಾವಣಗೆರೆ ಇವರಿಂದ ಅರ್ಜಿ ಸ್ವೀಕರಿಸಿ ಅಗತ್ಯ ದಾಖಲೆಗಳೊಂದಿಗೆ ಮೇ.20 ರೊಳಗೆ ಅರ್ಜಿ ಸಲ್ಲಿಸಬಹುದೆಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version