ದಿನದ ಸುದ್ದಿ
ದಾವಣಗೆರೆ | ಅರಣ್ಯ ಇಲಾಖೆ ಅಧಿಕಾರಿಗಳಿಂದ ಕೋಟ್ಯಾಂತರ ರೂಪಾಯಿ ಗೋಲ್ ಮಾಲ್ : ದೂರು ದಾಖಲು
ಸುದ್ದಿದಿನ, ದಾವಣಗೆರೆ : ಅರಣ್ಯ ಇಲಾಖೆ ಅಧಿಕಾರಿಗಳಿಂದ ಕೋಟ್ಯಾಂತರ ರೂಪಾಯಿ ಗೋಲ್ ಮಾಲ್ ನಡೆದಿದ್ದು,ಅಧಿಕಾರಿಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿಯಲ್ಲಿ 8.5 ಕೋಟಿ ರೂಪಾಯಿ ದುರ್ಬಳಕೆ ಆರೋಪದ ಮೇರೆಗೆ ಹರಪನಹಳ್ಳಿ ಆರ್ ಎಫ್ ಓ ಶಂಕರ್ ನಾಯ್ಕ, ಸಹಾಯಕ ಅರಣ್ಯಾಧಿಕಾರಿ ಶೇಶಿ, ತಾಂತ್ರಿಕ ಸಹಾಯಕ ಕುಮಾರ ನಾಯ್ಕ ವಿರುದ್ಧ ಹರಪನಹಳ್ಳಿ ತಾಲೂಕ್ ಪಂಚಾಯಿತ್ ಇಓ ಮಮತಾ ಹೊಸಗೌಡರ ಅವರು ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲೂಕು, ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಹರಪನಹಳ್ಳಿ ತಾಲೂಕಿನ ಮಾಡಲಗೇರೆ, ಕಂಚಿಕೆರೆ ಸೇರಿದಂತೆ ಹತ್ತು ಗ್ರಾಮಗಳ ವ್ಯಾಪ್ತಿಯಲ್ಲಿ 8.5ಕೋಟಿ ರೂಪಾಯಿ ಕಾಮಗಾರ ಮಾಡಿದ್ದ ಅರಣ್ಯ ಇಲಾಖೆ ಅಧಿಕಾರಿಗಳು. ಕಾಮಗಾರಿ ಸಂಪೂರ್ಣ ಹಾಳಾಗಿದ್ದ ಅಧಿಕಾರಿಗಳು ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹಾಕಿ ತನಿಖೆ ನಡೆಸುವಂತೆ ಇಂದು ಪೊಲೀಸರಿಗೆಇಓ ಮಮತಾ ದೂರು ನೀಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401