ದಿನದ ಸುದ್ದಿ

ದಾವಣಗೆರೆ | ವಿಕಲಚೇತನರಿಗೆ ಉಚಿತ ತರಬೇತಿ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ,ದಾವಣಗೆರೆ : ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ಹಾಗೂ ಜಿಲ್ಲಾ ಪಂಚಾಯತ್ ಸಂಯುಕ್ತಾಶ್ರಯದಲ್ಲಿ ಸ್ವ-ಉದ್ಯೋಗವನ್ನು ಆರಂಭಿಸಿ ಯಶಸ್ವಿ ಉದ್ಯಮಶೀಲ ವ್ಯಕ್ತಿಗಳಾಗುವ ನಿರೀಕ್ಷೆಯಲ್ಲಿರುವ ವಿಕಲಚೇತನರಿಗೆ ತರಬೇತಿಯನ್ನು ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ, ತೋಳಹುಣಸೆ, ದಾವಣಗೆರೆ ಇಲ್ಲಿ ಗ್ರಾಮೀಣ ಮಟ್ಟದ ಬಡತನ ರೇಖೆಗಿಂತ ಕೆಳಗಿರುವ 18 ರಿಂದ 45 ವರ್ಷ ವಯೋಮಾನದ ನಿರುದ್ಯೋಗ ಯುವಕ/ಯುವತಿಯರು ತರಬೇತಿ ಪಡೆಯಲು ಅರ್ಹರಿರುತ್ತಾರೆ.

ತರಬೇತಿಯು ಸಂಪೂರ್ಣ ಉಚಿತವಾಗಿದ್ದು, ಊಟ ಮತ್ತು ವಸತಿ ಸಹಿತವಾಗಿರುತ್ತದೆ. ಏ.05 ರಂದು ತರಬೇತಿ ಪ್ರಾರಂಭವಾಗಿದ್ದು, ಈ ಕೆಳಕಂಡ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ ನೋಂದಣಿ ಮಾಡಿಸಬಹುದಾಗಿದೆ. ತರಬೇತಿಯ ಕಾರ್ಯಕ್ರಮ-ಡಿ.ಟಿ.ಪಿ (ಡೆಸ್ಕಟಾಪ್ ಪಬ್ಲಿಷಿಂಗ್), 45 ದಿನಗಳು ತರಬೇತಿ ನಡೆಸಲಾಗುತ್ತದೆ.

ಆಸಕ್ತ ವಿಕಲಚೇತನರು ತರಬೇತಿಯಲ್ಲಿ ಭಾಗವಹಿಸಿ ಸ್ವ-ಉದ್ಯೋಗ ತರಬೇತಿಯ ಸದುಪಯೋಗ ಪಡೆಯಬಹುದು. ನೋದಾಣಿಗಾಗಿ ಮೊ.ಸಂ: 7975139332, 7019980484, 9964111314, 9538395817 ನ್ನು ಸಂಪರ್ಕಿಸಬಹುದೆಂದು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣಾಧಿಕಾರಿ ಡಾ.ಕೆ.ಕೆ ಪ್ರಕಾಶ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version