ದಿನದ ಸುದ್ದಿ
ವಿಡಿಯೋ | ದಾವಣಗೆರೆ : ಗ್ರಾ.ಪಂ ಚುನಾವಣಾ ಫಲಿತಾಂಶಕ್ಕಾಗಿ ಜನಜಂಗುಳಿ ; ಟ್ರಾಫಿಕ್ ಜಾಮ್
ಸುದ್ದಿದಿನ,ದಾವಣಗೆರೆ : ಗ್ರಾಮ ಪಂಚಾಯತ್ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯ ಎಲ್ಲ 06 ತಾಲ್ಲೂಕು ಕೇಂದ್ರಗಳಲ್ಲಿ ಮತ ಎಣಿಕೆ ನಡೆಯುತ್ತಿದೆ. ನಗರದ ಮೋತಿ ವೀರಪ್ಪ ಪದವಿ ಪೂರ್ವ ಕಾಲೇಜಿನಲ್ಲಿ ಮತ ಎಣಿಕೆ ನಡೆಯುತ್ತಿದ್ದು, ಕೆಲವು ಅಭ್ಯರ್ಥಿಗಳ ಫಲಿತಾಂಶ ಹೊರ ಬಿದ್ದಿದೆ.
ಸಂಜೆ ಐದು ಗಂಟೆವರೆಗೆ ಮತ ಎಣಿಕೆ ನಡೆಯಲಿದ್ದು, ಹಲವು ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆಯ ಫಲಿತಾಂಶಕ್ಕಾಗಿ ಕಾತುರರಾಗಿದ್ದು, ಅವರ ಬೆಂಬಲಿಗರು ಸಾಗರೋಪಾದಿಯಲ್ಲಿ ಸೇರಿದ್ದಾರೆ.
ಟ್ರಾಫಿಕ್ ಜಾಮ್
ಚಿಗಟೇರಿ ಆಸ್ಪತ್ರೆ ರಸ್ತೆಯಲ್ಲಿ ಸಂಪೂರ್ಣ ಟ್ರಾಫಿಕ್ ಜಾಮ್ ಉಂಟಾಗಿದ್ದು, ಪೊಲೀಸರು ಟ್ರಾಫಿಕ್ ಆಗದಂತೆ ತಡೆಯಲು ಪ್ರಯತ್ನಿಸುತ್ತಿದ್ದಾರೆ.
ವಿಡಿಯೋ
ಸುದ್ದಿದಿನ.ಕಾಂ|ವಾಟ್ಸಾಪ್|9980346243