ದಿನದ ಸುದ್ದಿ

ದಾವಣಗೆರೆ ಜಿಮ್ ಟ್ರೈನರ್ ಬರ್ಬರ ಹತ್ಯೆ

Published

on

ಸುದ್ದಿದಿನ,ವಿಜಯನಗರ (ಉಚ್ಚಂಗಿದುರ್ಗ): ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಬೇವಿನಹಳ್ಳಿ ತಾಂಡದ,ಹಾಲಮ್ಮನ ತೋಪಿನ ಬಳಿ ದಾವಣಗೆರೆ ನಿಟ್ಟುವಳ್ಳಿಯ ನಿವಾಸಿ ಜಿಮ್ ಟ್ರೈನರ್ ಧನ್ಯಕುಮಾರ್ ಅವರ ಬರ್ಬರ ಹತ್ಯೆಯಾಗಿದೆ ಎಂದು ವಿಜಯನಗರ ಎಸ್ಪಿ ಡಾ. ಅರುಣ್ ತಿಳಿಸಿದ್ದಾರೆ.

ಬೇವಿನಹಳ್ಳಿ ತಾಂಡದ ಹತ್ತಿರ ಬುಧವಾರ ರಾತ್ರಿ ಕೊಲೆ ನಡೆದಿದ್ದು, ಸುಮಾರು 30 ಕಡೆ ಜಿಮ್ ಟ್ರೈನರ್ ಧನ್ಯಗೆ ಚುಚ್ಚಿ ಸಾಯಿಸಲಾಗಿದೆ. ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ನಡೆದಿರ ಬಹುದು ಎಂದು‌ ಶಂಕೆ ವ್ಯಕ್ತಪಡಿಸಿದ್ದಾರೆ.

ಕೊಲೆಗೆ ನಿಖರವಾದ ಕಾರಣಗಳು ತಿಳಿದು ಬಂದಿಲ್ಲವಾದರೂ ಸ್ನೇಹಿತರೊಂದಿಗೆ ಬಾಡೂಟ ಮಾಡುವ ಸಂದರ್ಭ ಕ್ಷುಲ್ಲಕ ವಿಷಯಕ್ಕೆ ಜಗಳ ನಡೆದು ಕೊಲೆಯಲ್ಲಿ ಅಂತ್ಯವಾಗಿದೆ. ಅರಸೀಕೆರೆ ಫೋಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version