ದಿನದ ಸುದ್ದಿ

ದಾವಣಗೆರೆ | ಹೆಗಡೆ ಡಯಾಗ್ನಸ್ಟಿಕ್ ಸೆಂಟರ್ಗೆ ಜಿಲ್ಲಾಧಿಕಾರಿ ದಿಢೀರ್ ಭೇಟಿ

Published

on

ಸುದ್ದಿದಿನ,ದಾವಣಗೆರೆ : ಜಿಲ್ಲಾಧಿಕಾರಿಗಳಾದ ಮಹಾಂತೇಶ ಬೀಳಗಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಾದ ಹನುಮಂತರಾಯ ಬುಧವಾರ ನಗರದ ಹೆಗಡೆ ಡಯಾಗ್ನಸ್ಟಿಕ್ ಸೆಂಟರ್ಗೆ ದಿಢೀರ್ ಭೇಟಿ ನೀಡಿ ಸಿಟಿ ಸ್ಕ್ಯಾನ್ ಬಗ್ಗೆ ಪರಿಶೀಲನೆ ನಡೆಸಿದರು.

ರೋಗಿಗಳು ಮತ್ತವರ ಸಂಬಂಧಿಕರೊಂದಿಗೆ ಮಾತನಾಡಿ ನಿಗದಿತ ದರ ಪಡೆಯುತ್ತಿರುವ ಬಗ್ಗೆ ವಿಚಾರಿಸಿದರು. ಹಾಗೂ ಅಲ್ಲಿನ ಮುಖ್ಯಸ್ಥರು ಮತ್ತು ವೈದ್ಯರಿಗೆ ಸರ್ಕಾರ ನಿಗದಿಪಡೆಸಿದಕ್ಕಿಂತ ಹೆಚ್ಚಿನ ದರ ಪಡೆಯಬಾರದೆಂದು ಸೂಚನೆ ನೀಡಿದರು. ದರ ವಿವರದ ಬೋರ್ಡನ್ನು ವೀಕ್ಷಿಸಿದರು. ಹಾಗೂ ಪ್ರತಿ ಸ್ಕ್ಯಾನ್ ಆದ ನಂತರ ಸ್ಯಾನಿಟೈಸ್ ಮಾಡಿ ಮುಂದಿನ ಪರೀಕ್ಷೆ ನಡೆಸುವಂತೆ ತಾಕೀತು ಮಾಡಿ ಖುದ್ದು ಪರಿಶೀಲಿಸಿದರು.

ಇದನ್ನೂ ಓದಿ | ಭಾರತ | ಕಳೆದ 24 ಗಂಟೆಗಳಲ್ಲಿ 3,980 ಜನರು ಕೊರೋನಾದಿಂದ ಸಾವು

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version