ದಿನದ ಸುದ್ದಿ

ದಾವಣಗೆರೆ | ಅಕ್ರಮ ಅರೋಪ ; ದೂರು ಸಲ್ಲಿಕೆ : ಜಿಲ್ಲಾ ಪಂಚಾಯತಿ ಸಿಇಒ ಇಟ್ನಾಳ್ ಸ್ಪಷ್ಟನೆ

Published

on

ಸುದ್ದಿದಿನ,ದಾವಣಗೆರೆ:ತಾಲ್ಲೂಕು ಪಂಚಾಯಿತಿ ಆರ್ಥಿಕ ವರ್ಷ 2023 -24 ಸಾಲಿನಲ್ಲಿ ಅನಿರ್ಬಂಧಿತ ಅನುದಾನದ ಅಡಿಯಲ್ಲಿ ಅಕ್ರಮ ನಡೆದಿದೆ ಎಂಬ ದೂರಿಗೆ ಸಂಬಂಧಿಸಿದಂತೆ ಕಛೇರಿಯಿಂದ ತನಿಖೆ ನಡೆಸಲು ಅಧಿಕಾರಿಗಳ ತಂಡವನ್ನು ರಚಿಸಿದ್ದು, ಲೋಪದೋಷ ಕಂಡು ಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆಎಂದು ಜಿಲ್ಲಾ ಪಂಚಾಯತ್ ಸಿಇಒ ಸುರೇಶ್ ಬಿ ಇಟ್ನಾಳ್ ತಿಳಿಸಿದ್ದಾರೆ.

ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ ಪ್ರಧಾನ ಕಾರ್ಯದರ್ಶಿ ಡಾ.ಕೆ.ಎ ಓಬಳೇಶ್ ಅವರು ಕರ್ತವ್ಯ ಲೋಪ ಮತ್ತು ಭ್ರಷ್ಟಚಾರ ಆರೋಪಿಸಿ ಜಿಲ್ಲಾ ಪಂಚಾಯತಿ ಸಿ.ಇ.ಒ ಇಟ್ನಾಳ್ ಹಾಗೂ ಇಬ್ಬರು ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಸಿರುವ ಬಗ್ಗೆ ನಮ್ಮ ‘ಸುದ್ದಿದಿನ.ಕಾಂ’ ( ಆನ್ ಲೈನ್ ನ್ಯೂಸ್ ಪೋರ್ಟಲ್) ನಲ್ಲಿ ಇದೇ 25 ರಂದು ಪ್ರಕಟಿಸಿರುವ ಸುದ್ದಿಗೆ ಸಿಇಒ ಇಟ್ನಾಳ್ ಸ್ಪಷ್ಟನೆ ಕೊಟ್ಟಿದ್ದಾರೆ.

ಇದನ್ನೂ ಓದಿ..

ದಾವಣಗೆರೆ | ಕರ್ತವ್ಯ ಲೋಪ ಮತ್ತು ಭ್ರಷ್ಟಚಾರ ಆರೋಪ : ಸಿ.ಇ.ಒ ಇಟ್ನಾಳ್ ಹಾಗೂ ಇಬ್ಬರು ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು

 

ಆರ್ಥಿಕ ವರ್ಷ 2023 24 ಸಾಲಿಗೆ ಸಂಬಂಧಿಸಿದಂತ ಅನನಿರ್ಬಂಧಿತ ಅನುದಾನದಡಿಯಲ್ಲಿ ಖರೀದಿ ಮಾಡುವ ಸಾಮಗ್ರಿಗಳ ಕುರಿತು ಕ್ರಿಯಾ ಯೋಜನೆಗೆ ಕಚೇರಿಯಿಂದ ಆಡಳಿತಾತ್ಮಕ ಮಂಜೂರಾತಿಗೆ ಮಾತ್ರ ಅವಕಾಶ ನೀಡಲಾಗಿರುತ್ತದೆ. ಉಳಿದಂತೆ ಖರೀದಿಯನ್ನು ನಿಯಮಾನುಸಾರ ತಾಲ್ಲುಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಗಳು ನಿರ್ವಹಿಸಬೇಕಾಗಿರುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಆರ್ಥಿಕ ವರ್ಷ 2020 – 21ನೇ ಸಾಲಿನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ನಡೆದಿರುವ ರೂ 7856100 ರೂಪಾಯಿಗಳ ಖರೀದಿಯ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಾನು 2020-21 ನೇ ಸಾಲಿನಲ್ಲಿ ಈ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಿರುವುದಿಲ್ಲ ಎಂದು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version