ದಿನದ ಸುದ್ದಿ

ದಾವಣಗೆರೆ | ಕುರಿಗಾಹಿಗಳಿಗೆ ವಿಮಾ ಸೌಲಭ್ಯ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ,ದಾವಣಗೆರೆ : 2022-23ನೇ ಸಾಲಿನಲ್ಲಿ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ ವತಿಯಿಂದ ಕುರಿ/ಮೇಕೆ ಸಾಕಾಣಿಕೆದಾರರು/ವಲಸೆ ಕುರಿಗಾರರು ಆಕಸ್ಮಿಕ ಮರಣ ಹೊಂದಿದಲ್ಲಿ ಅವಲಂಬಿತ ಕುಟುಂಬವನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಲು ಕುರಿಗಾಹಿಗಳಿಗೆ ಐದು ಲಕ್ಷ ರೂ. ವಿಮಾ ಸೌಲಭ್ಯ ಪಡೆಯಯಬಹುದು.

ಫಲಾನುಭವಿಗಳು ನಿಗದಿತ ನಮೂನೆಯಲ್ಲಿ ಅರ್ಜಿ. ಆಧಾರ ಕಾರ್ಡ್ ನಲ್ಲಿರುವ ಖಾಯಂ ವಿಳಾಸದ ವ್ಯಾಪ್ತಿಯಲ್ಲಿ ಅರ್ಜಿಗಳನ್ನು ಸ್ವೀಕರಿಸಿ ಅದೇ ಜಿಲ್ಲೆಯಲ್ಲಿ ವಿಮೆ ಮಾಡಿಸಲಾಗುವುದು.

ರೇಷನ್ ಕಾರ್ಡ್ ನಲ್ಲಿರುವ ಕುಟುಂಬದ ಸದಸ್ಯರ ಪಟ್ಟಿ. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಅರ್ಜಿದಾರರಾಗಿದ್ದಲ್ಲಿ ಜಾತಿ ಪ್ರಮಾಣ ಪತ್ರದ ಪ್ರತಿ. ಪಶುವೈದ್ಯಾಧಿಕಾರಿಗಳಿಂದ ಕನಿಷ್ಟ 30 ಕುರಿ / ಮೇಕೆಗಳು ಹೊಂದಿರುವ ಬಗ್ಗೆ ದೃಢೀಕೃತ ಪ್ರಮಾಣ ಪತ್ರ. ನಾಮ ನಿರ್ದೇಶಿತ ವಿವರಣಾ ಪ್ರಮಾಣ ಪತ್ರ. ಒದಗಿಸಬೇಕಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ, ದಾವಣಗೆರೆ ಡಾ: ಶಿವಕುಮಾರ್ ಜಿ.ಎಸ್. ದೂರವಾಣಿ ಸಂಖ್ಯೆ: 9353567572 ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ದಾವಣಗೆರೆ ಪಶುಪಾಲನಾ ಹಾಗೂ ಪಶುವೈದ್ಯ ಸೇವಾ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version