ದಿನದ ಸುದ್ದಿ
ದಾವಣಗೆರೆ | ಒಳಮೀಸಲಾತಿ ; ಉಪ ಸಮಿತಿ ರಚಿಸಿಲು ಆಗ್ರಹಿಸಿ ಛಲವಾದಿ ಮಹಾಸಭಾದಿಂದ ಪ್ರತಿಭಟನೆ
ಸುದ್ದಿದಿನ,ದಾವಣಗೆರೆ:ಬಲಗೈ ಸಮುದಾಯದ ಜನ ಸಂಖ್ಯೆಯನ್ನು ಉದ್ದೇಶ ಪೂರ್ವಕವಾಗಿ ಕಡಿಮೆ ಮಾಡಿದ್ದು, ಮೀಸಲಾತಿಯನ್ನು ಸಂಬಂಧಿಸಿದ ಜಾತಿಗಳಿಗೆ ಹಂಚಿಕೆ ಮಾಡಲು ಸಚಿವ ಸಂಪುಟದ ಉಪ ಸಮಿತಿ ರಚಿಸಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಜಿಲ್ಲಾ ಛಲವಾದಿ ಮಹಾಸಭಾ ವತಿಯಿಂದ ನಗರದ ಅಂಬೇಡ್ಕರ್ ವೃತ್ತದಲ್ಲಿ ಇಂದು ಬೃಹತ್ ಪ್ರತಿಭಟನೆ ನಡೆಸಲಾಯಿತು.
ನ್ಯಾಯಮೂರ್ತಿ ನಾಗಮೋಹನ್‌ದಾಸ್‌ರವರ ಅಧ್ಯಕ್ಷತೆಯ ಒಳ ಮೀಸಲಾತಿ ಏಕ ಸದಸ್ಯ ವಿಚಾರಣಾ ಆಯೋಗವು ದಿನಾಂಕ:04-08-2025 ರಂದು ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಪರಿಶಿಷ್ಟ ಜಾತಿ ಬಲಗೈ ಸಮುದಾಯಕ್ಕೆ ಸೇರಿದ ಪರೈಯ್ಯ, ಪರವನ್ ಜಾತಿಯನ್ನು ಎಡಗೈ ಪಂಗಡಕ್ಕೆ ಸೇರಿಸಿದೆ.
ಬಲಗೈ ಸಮುದಾಯಕ್ಕೆ ಸೇರಿದ ಇನ್ನೂ ಹಲವು ಜಾತಿಗಳನ್ನು ಅತ್ಯಂತ ಹಿಂದುಳಿದ ಜಾತಿಗಳ ಗುಂಪಿಗೆ ಸೇರಿಸಿ ಬಲಗೈ ಸಮುದಾಯದ ಜನ ಸಂಖ್ಯೆಯನ್ನು ಉದ್ದೇಶ ಪೂರ್ವಕವಾಗಿ ಕಡಿಮೆ ಮಾಡಿರುವುದಲ್ಲದೇ, ಜಾತಿಯೇ ಅಲ್ಲದ, ಆದಿ ದ್ರಾವಿಡ, ಆದಿ ಆಂಧ್ರ ಸಮೂಹಕ್ಕೆ ಶೇಕಡ 1%ರಷ್ಟು ಮೀಸಲಾತಿ ನಿಗದಿಪಡಿಸಿರುವುದನ್ನು ರದ್ದುಪಡಿಸಿ ಎಂದು ಸರ್ಕಾರಕ್ಕೆ ಆಗ್ರಹಿಸಲಾಯಿತು.
ಪ್ರತಿಭಟನೆಯಲ್ಲಿ ಸಮಾಜದ ಮುಖಂಡರಾದ ಎಸ್. ಶೇಖರಪ್ಪ, ಎನ್. ರುದ್ರಮುನಿ, ಹೆಚ್.ಕೆ. ಬಸವರಾಜ, ಜಯಪ್ರಕಾಶ್, ತಣೆಗೆರೆ ಅಣ್ಣಪ್ಪ, ನಾಗರಾಜ ಚನ್ನಗಿರಿ, ಧರಣೇಂದ್ರ, ಲೋಕೇಶ್, ತಿಮ್ಮಣ್ಣ, ಜಗಳೂರಿನ ನಿಜಲಿಂಗಪ್ಪ, ತಿಪ್ಪೇಸ್ವಾಮಿ, ಡಾ. ಜಗನಾಥ, ಕೊಟ್ರಬಸಪ್ಪ, ರವಿ ಆರ್ ದೊಡ್ಡಮನೆ, ಸಾರಥಿ ಬಸವರಾಜು, ನವೀನ್ ಕುಮಾರ್, ಎಲ್.ಟಿ. ಮಧುಸೂಧನ್, ಎನ್.ಡಿ. ಹಾಲೇಶಪ್ಪ, ರುದ್ರಮ್ಮ ಮಲ್ಲಿಕಾರ್ಜುನ್, ಸಿ.ಎಂ. ಓಂಕಾರಪ್ಪ, ಗಂಗಾಧರ, ಪ್ರಶಾಂತ್ ಸೇರಿದಂತೆ ಸಮಾಜದ ಪ್ರಮುಖರು ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243