ದಿನದ ಸುದ್ದಿ

ದಾವಣಗೆರೆ ಜಿಲ್ಲೆಯಲ್ಲಿಂದು 7 ಕೊರೊನಾ ಪಾಸಿಟಿವ್ ಕೇಸ್ ಪತ್ತೆ : ಒಟ್ಟು 8261 ನೆಗೆಟಿವ್

Published

on

ಸುದ್ದಿದಿನ,ದಾವಣಗೆರೆ : ಜಿಲ್ಲೆಯಲ್ಲಿಂದು 7 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಇವರಿಗೆ ಜಿಲ್ಲಾ ಕೋವಿಡ್ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇಂದು 276 ಜನರ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ಇಂದು ಒಟ್ಟು 772 ನೆಗೆಟಿವ್ ಎಂದು ವರದಿ ಬಂದಿದೆ. ಇದುವರೆಗೆ ಒಟ್ಟು 8982 ಜನರ ಗಂಟಲುದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು 8261 ನೆಗೆಟಿವ್ ಎಂದು ವರದಿ ಬಂದಿದೆ.

16 ಕಂಟೈನ್‍ಮೆಂಟ್ ಝೋನ್‍ಗಳಲ್ಲಿ ಪ್ರತಿ ದಿನ ಜ್ವರ/ಐಎಲ್‍ಐ/ಸಾರಿ ಸಮೀಕ್ಷೆ ನಡೆಸಲಾಗುತ್ತಿದೆ. 3 ದಿನಗಳಿಗೊಮ್ಮೆ ಬಫರ್ ಝೋನ್‍ನಲ್ಲಿ ಸಮೀಕ್ಷೆ ನಡೆಸಲಾಗುತ್ತಿದೆ. ತೀವ್ರ ಉಸಿರಾಟದ ತೊಂದರೆಗೆ(ಎಸ್‍ಎಆರ್‍ಐ)ಸಂಬಂಧಿಸಿದಂತೆ ಇದುವರೆಗೆ 335 ಪರೀಕ್ಷೆ ನಡೆಸಲಾಗಿದ್ದು ಈ ಪೈಕಿ 3 ಪಾಸಿಟಿವ್ ಬಂದಿದ್ದು, 6 ರ ಫಲಿತಾಂಶ ನಿರೀಕ್ಷೆಯಲ್ಲಿದೆ.

ಶೀತ ಕೆಮ್ಮು ಜ್ವರ (ಐಎಲ್‍ಐ)ಕ್ಕೆ ಸಂಬಂಧಿಸಿದಂತೆ 634 ಪರೀಕ್ಷೆ ನಡೆಸಲಾಗಿದ್ದು, 605 ನೆಗೆಟಿವ್ ಎಂದು ವರದಿ ಬಂದಿದ್ದು, 7 ಪಾಸಿಟಿವ್ ವರದಿ ಬಂದಿದೆ ಮತ್ತು 22 ಜನರ ಪರೀಕ್ಷೆ ಫಲಿತಾಂಶ ನಿರೀಕ್ಷೆಯಲ್ಲಿದೆ.

ಕೋವಿಡ್-19: ಜೂನ್ 2 ರ ವರದಿ

  1. ಒಟ್ಟು ಪ್ರಕರಣಗಳು : 163
  2. ಗುಣಮುಖ: 121
  3. ಸಾವು: 04
  4. ಸಕ್ರಿಯ ಪ್ರಕರಣಗಳು: 38

ಇತರೆ ಮಾಹಿತಿ: ಜಿಲ್ಲಾವಾರು ಸೋಂಕಿತರು, ನಿಗದಿತ ಆಸ್ಪತ್ರೆಗಳಲ್ಲಿ ಪ್ರತ್ಯೇಕವಾಗಿರುವವರು, ಟೆಲಿಮೆಡಿಸಿನ್ ಸೌಲಭ್ಯದ ಮಾಹಿತಿ, ತಬ್ಲಿಘಿ ಜಮಾತ್ ನಲ್ಲಿ ಭಾಗವಹಿಸಿದವರಿಗೆ ಸೂಚನೆಗಳು, ಕೊರೊನ ನಿಗಾ ಅಪ್ಲಿಕೇಶನ್ ಹಾಗೂ ಸಹಾಯವಾಣಿ ವಿವರಗಳಿವೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version