ದಿನದ ಸುದ್ದಿ
ದಾವಣಗೆರೆ | ಕೆಟಿಜೆ ನಗರ ಕಂಟೈನ್‍ಮೆಂಟ್ ವಲಯದ ಡಿನೋಟಿಫಿಕೇಷನ್
ಸುದ್ದಿದಿನ,ದಾವಣಗೆರೆ: ನಗರದಲ್ಲಿ ದಾಖಲಾಗಿದ್ದ ಒಂದು ಪಾಸಿಟಿವ್ ಪ್ರಕರಣ ದಾಖಲಾಗಿದ್ದ ಕೆಟಿಜೆ ನಗರದಲ್ಲಿ ಇದೀಗ 28 ದಿನಗಳಿಂದ ಯಾವುದೇ ಹೊಸ ಕೊರೊನಾ ಪ್ರಕರಣ ದಾಖಲಾಗದ ಹಿನ್ನೆಲೆಯಲ್ಲಿ ವಿಪತ್ತು ನಿರ್ವಹಣೆ ಕಾಯ್ದೆ 2005 ರ ಅಧಿಕೃತ ಜ್ಞಾಪನೆ ಅನ್ವಯ ಈ ಕಂಟೈನ್‍ಮೆಂಟ್ ವಲಯವನ್ನು ಡಿನೋಟಿಪಿಫೈ ಮಾಡಲಾಗಿದೆ.
ಮೇ 6 ರ ಸಂಜೆಯಿಂದ ಕೋವಿಡ್ ಪಾಸಿಟಿವ್ ಆಗಿದ್ದ ರೋಗಿ ಸಂಖ್ಯೆ 665 ನೆಲೆಸಿದ್ದ ಕೆಟಿಜೆ ಬಡಾವಣೆಯ ಪೂರ್ವಕ್ಕೆ : ನಿಟ್ಟುವಳ್ಳಿ ಮೇನ್ ರಸ್ತೆ , ಕೆ.ಟಿ.ಜೆ ನಗರ ಹಾಗೂ ಶಿವಪ್ಪ ಸರ್ಕಲ್. ಪಶ್ಚಿಮಕ್ಕೆ : ಕೆ.ಟಿ.ಜೆ ನಗರ 3ನೇ ಮೇನ್ (10 ರಿಂದ 18ನೇ ಕ್ರಾಸ್).. ಉತ್ತರಕ್ಕೆ : ಕೆ.ಟಿ.ಜೆ ನಗರ 10ನೇ ಕ್ರಾಸ್, (ಕೆ.ಟಿ.ಜೆ ನಗರ 3ನೇ ಮೇನ್ ನಿಂದ ನಿಟ್ಟುವಳ್ಳಿ ಮೇನ್ ರಸ್ತೆ). ದಕ್ಷಿಣಕ್ಕೆ; ಕೆ.ಟಿ.ಜೆ ನಗರ 18ನೇ ಕ್ರಾಸ್ ( ಡಾಂಗೆ ಪಾರ್ಕ್ ನಿಂದ ಕೆ.ಟಿ.ಜೆ ನಗರ 3ನೇ ಮೇನ್ ರಸ್ತೆ).
ಹಾಗೂ ಈ ಬಡಾವಣೆಯಲ್ಲಿ ಪೂರ್ವಕ್ಕೆ ರಾಮ್‍ಪುರ, ಕೆಂಚಮ್ಮನಹಳ್ಳಿ, ಚಿಕ್ಕನಹಳ್ಳಿ, ಆವರಗೆರೆ, ಪಶ್ಚಿಮಕ್ಕೆ: ದೊಡ್ಡಬಾತಿ, ಕುಂದವಾಡ, ಹಳೆ ಕುಂದವಾಡ. ಉತ್ತರಕ್ಕೆ: ಆವರಗೊಳ್ಳ, ದೊಡ್ಡಬೂದಿಹಾಳು, ಕಲ್ಪನಹಳ್ಳಿ, ಬೇತೂರು. ದಕ್ಷಿಣಕ್ಕೆ: ಮಿಟ್ಲಕಟ್ಟೆ, ನಾಗನೂರು, ಶಿರಮಗೊಂಡನಹಳ್ಳಿ, ಪಾಮೇನಹಳ್ಳಿ. 2198 ವಸತಿಗಳು, 250 ಅಂಗಡಿಗಳು, 8792 ಜನಸಂಖ್ಯೆ, 02 ಸರ್ಕಾರಿ ಶಾಲೆ, 4 ಅಂಗನವಾಡಿಗಳು ಹಾಗೂ 3 ಖಾಸಗಿ ಶಾಲೆಗಳ ಈ ಬಡಾವಣೆಯಲ್ಲಿ ಬಫರ್ ಜೋನ್ 5 ಕಿ ಮೀ ಪರಿದಿಯ ಕಂಟೈನ್‍ಮೆಂಟ್ ವಲಯವನ್ನು ನಿಯಮಾನುಸಾರ ಡಿನೋಟಿಫೈ ಮಾಡಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಆದೇಶಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243