ದಿನದ ಸುದ್ದಿ

ದಾವಣಗೆರೆ | ಗ್ಯಾಸ್ ಸಿಲಿಂಡರ್ ವಿತರಕನ ಮೇಲೆ ಪೊಲೀಸರಿಂದ ಹಲ್ಲೆ ; ಆರೋಪ

Published

on

ಸುದ್ದಿದಿನ,ದಾವಣಗೆರೆ : ಜಿಲ್ಲೆಯ, ಚನ್ನಗಿರಿ ತಾಲೂಕಿನ ನವಿಲೇಹಾಳು ಗ್ರಾಮದ ಗ್ಯಾಸ್ ಸಿಲಿಂಡರ್ ವಿತರಕ ರಜಾಕ್ ಎಂಬುವವರ ಮೇಲೆ ಮಂಗಳವಾರ ಪೊಲೀಸರು ಥಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಗ್ಯಾಸ್ ಸಿಲಿಂಡರ್ ವಿತರಕ ರಜಾಕ್ ಗ್ಯಾಸ್ ಸಿಲೆಂಡರನ್ನು ಸಾರ್ವಜನಿಕರಿಗೆ ವಿತರಿಸಲು ತಮ್ಮ ಬೈಕ್ ಅನ್ನು ರಿಪೇರಿ ಮಾಡಿಸಲು ಹೋದ ಸಂದರ್ಭದಲ್ಲಿ ಸಂತೇಬೆನ್ನೂರು ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿ ರಜಾಕ್ ಎಂಬುವವರಿಗೆ ಮನಸೋ ಇಚ್ಚೆ ಲಾಠಿ ಮೂಲಕ ಹೊಡೆದಿದ್ದಾರೆ ಎಂದು ದೂರಲಾಗಿದೆ.

ಘಟನೆ ವಿವರಣೆ

ದಾವಣಗೆರೆ ಜಿಲ್ಲೆ, ಚನ್ನಗಿರಿ ತಾಲೂಕಿನ ನವಿಲೇಹಾಳು ಗ್ರಾಮದಲ್ಲಿ ಗ್ಯಾಸ್ ವಿತರಕ ರಜಾಕ್ ಮಂಗಳವಾರ ಸಂಜೆ ತಮ್ಮ ಬೈಕ್ ಅನ್ನು ರಿಪೇರಿ ಮಾಡಿಸಲು ಹೋಗಿರುತ್ತಾರೆ. ಆ ಸಂದರ್ಭದಲ್ಲಿ ಸಂತೇಬೆನ್ನೂರು ಠಾಣೆಯ ಸಿಬ್ಬಂದಿ ರಜಾಕ್ ಅವರನ್ನು ವಿಚಾರಿಸಿರುತ್ತಾರೆ. ರಜಾಕ್ ಅವರು ಗ್ಯಾಸ್ ಸಿಲಿಂಡರ್ ನಾಳೆ ವಿತರಿಸಬೇಕಿದೆ, ಆ ಕಾರಣಕ್ಕೆ ಬೈಕ್ ರಿಪೇರಿ ಮಾಡಿಸಲು ಬಂದಿದ್ದೇನೆ ಎಂದಿದ್ದಿರುತ್ತಾರೆ. ಆಗ ಪೋಲಿಸ್ ಸಿಬ್ಬಂದಿ ಶಿವರುದ್ರಪ್ಪ ಮೇಟಿ ಎಂಬುವವರು ಅವರ ಮಾತನ್ನು ಕಡೆಗಣಿಸಿ ಲಾಠಿ ಮೂಲಕ ರಜಾಕ್ ಅವರ ಕೈ, ಕಾಲು, ತೊಡೆಯ ಭಾಗಕ್ಕೆ ಮನಸೋ ಇಚ್ಚೆ ಥಳಿಸಿರುತ್ತಾರೆ.

ಲಾಠಿ ಚಾರ್ಜ್ ಮಾಡೋಹಾಗಿಲ್ಲ : ಹೈ ಕೋರ್ಟ್

ಲಾಕ್ ಡೌನ್ ಉಲ್ಲಂಘಿಸುವವರ ವಿರುದ್ಧ ಪೊಲೀಸರು ಬಲವನ್ನು ಬಳಸುತ್ತಿದ್ದಾರೆ ಎಂಬ ಆರೋಪಗಳ ಬಗ್ಗೆ  ಬೆಂಗಳೂರು ಪೊಲೀಸ್ ಆಯುಕ್ತರು ಲಾಠಿಗಳನ್ನು ಬಳಸದಂತೆ ಸುತ್ತೋಲೆ ಹೊರಡಿಸಿದ್ದಾರೆ.

ಅದೇ ರೀತಿ ಡಿಜಿ ಮತ್ತು ಐಜಿ ಪೊಲೀಸ್‌ ಅಧಿಕಾರಿಗಳು ರಾಜ್ಯದಾದ್ಯಂತ ಪೊಲೀಸ್ ಸಿಬ್ಬಂದಿಗೆ ಮಾರ್ಗಸೂಚಿಗಳನ್ನು, ಸೂಚನೆಗಳನ್ನು ನೀಡಬೇಕು. ಪೊಲೀಸರ ಮೇಲೆ ಮೀತಿ ಮೀರಿ ವರ್ತಿಸುವ ಸಂಬಂಧಿಸಿದಂತೆ ಆರೋಪಗಳನ್ನು ಮಾಡುವ ಸಂದರ್ಭವಿಲ್ಲದಿರಬಹುದು. ಆದರೆ ಪೊಲೀಸರು ಲಾಠಿ ಚಾರ್ಜ್‌ ಮಾಡಬಾರದು ಎಂದು ನ್ಯಾಯಾಲಯ ಹೇಳಿದೆ.

ವಿಡಿಯೋ ನೋಡಲು ಲಿಂಕ್ ಮೇಲೆ ಕ್ಲಿಕ್ ಮಾಡಿ

https://youtu.be/kLVL4KVsqVc

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version