ದಿನದ ಸುದ್ದಿ
ದಾವಣಗೆರೆ | ನಾಯಿ ದಾಳಿ ; 20 ಕುರಿ ಸಾವು
ಸುದ್ದಿದಿನ ಡೆಸ್ಕ್ : ದಾವಣಗೆರೆ ತಾಲ್ಲೂಕು ಕಡ್ಲೆಬಾಳು ಗ್ರಾಮದ ಕುರಿಹಟ್ಟಿಯಲ್ಲಿರು ಕುರಿ ಮತ್ತು ಅವುಗಳ ಮರಿಗಳ ಮೇಲೆ ಇಂದು ನಾಯಿ ದಾಳಿ ನಡೆಸಿದ ಪರಿಣಾಮ, 2 ಕುರಿ ಮತ್ತು 18 ಮರಿಗಳು ಸಾವನ್ನಪ್ಪಿವೆ.
ಹರಪನಹಳ್ಳಿ ತಾಲ್ಲೂಕು ಹೊಂಬಳಗಟ್ಟಿ ಗ್ರಾಮದ ಪೂಜಾರಿ ದಾಳೆಪ್ಪರ ಬೊಮ್ಮಪ್ಪ, ತಿಮ್ಮಪ್ಪನವರಿಗೆ ಸೇರಿದ ಕುರಿಗಳಾಗಿದ್ದು, ಕುರಿ ಮೇಯಿಸಲು ಕಡ್ಲೆ ಬಾಳುವಿಗೆ ಹೋಗಿದ್ದರು. ಈ ಸಂದರ್ಭದಲ್ಲಿ ನಾಯಿ ಕುರಿಗಳ ಮೇಲೆ ದಾಳಿನಡೆಸಿ ಕೊಂದು ಹಾಕಿದೆ ಎಂದು ಕುರಿಯ ಮಾಲೀಕರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243