ದಿನದ ಸುದ್ದಿ
ದಾವಣಗೆರೆ | ಜ.30 ರಂದು ತಿಂಗಳ ಅಂಗಳ ಬಳಗದಿಂದ ಸಾಹಿತ್ಯ – ಸಾಂಸ್ಕೃತಿಕ ಸಮ್ಮಿಲನ
ಸುದ್ದಿದಿನ,ದಾವಣಗೆರೆ :ನಗರದ ತಿಂಗಳ ಅಂಗಳ ಸಾಹಿತ್ಯ ಮತ್ತು ಸಾಂಸ್ಕೃತಿಕ ಬಳಗದ ವತಿಯಿಂದ ಲೇಖಕಿ ಶ್ರೀಮತಿ ಸಂಧ್ಯಾ ಸುರೇಶ್ ಅವರ ಆತಿಥ್ಯದಲ್ಲಿ ಜ.30 ರ ಶನಿವಾರ ಸಂಜೆ 4 ರಿಂದ 6 ಗಂಟೆಯವರೆಗೆ ಸಾಹಿತ್ಯ – ಸಾಂಸ್ಕೃತಿಕ ಸಮ್ಮಿಲನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಬಳಗದ ಸಂಚಾಲಕ ಗಂಗಾಧರ ಬಿ ಎಲ್ ನಿಟ್ಟೂರ್ ತಿಳಿಸಿದ್ದಾರೆ.
ಶ್ರೀಮತಿ ಸಂಧ್ಯಾ ಸುರೇಶ್ ಅವರ ದಾವಣಗೆರೆ ಅಶೋಕ ನಗರದ ದೇವನಗರಿ ಗ್ಯಾಸ್ ಗೋಡೌನ್ ಎದುರಿನ ರಸ್ತೆಯ 4ನೇ ಕ್ರಾಸ್ ನಲ್ಲಿರುವ ಸಂಧ್ಯಾ – ಸೂರ್ಯ ಸದನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಗಂಗಾಧರ ಬಿ ಎಲ್ ನಿಟ್ಟೂರ್ ಅವರಿಂದ ಪ್ರಾರ್ಥನಾ ನೃತ್ಯ, ಸಮಾಜ ಸೇವಕಿ ಶ್ರೀಮತಿ ಮಹಾದೇವಮ್ಮ, ದಾವಣಗೆರೆ ಅವರಿಂದ ಗೀತ ಗಾಯನ ಹಾಗೂ ಲೇಖಕ ಪಾಪುಗುರು ಅವರಿಂದ ಶ್ರೀಮತಿ ಸಂಧ್ಯಾ ಸುರೇಶ್ ಅವರ ” ಶ್ರೀ ಕೃಷ್ಣನ ಪಾಂಚಜನ್ಯ ” ಕಥಾ ಸಂಕಲನದ ಒಂದು ಕಥಾವಲೋಕನ ನಡೆಯಲಿದೆ.
ಆಹ್ವಾನಿತ ಕವಿ ಮಿತ್ರರಾಗಿ ಪಾಲ್ಗೊಳ್ಳಲಿರುವ
ಕವಿಗಳಾದ ಡಾ. ಆನಂದ್ ಋಗ್ವೇದಿ, ಮಹಾಂತೇಶ್ ಬಿ ನಿಟ್ಟೂರು, ಸಂತೆಬೆನ್ನೂರು ಫೈಜ್ನಟ್ರಾಜ್, ಲಲಿತ್ ಕುಮಾರ್ ಜೈನ್, ರಾಜೇಂದ್ರಪ್ರಸಾದ್ ನೀಲಗುಂದ, ಸತೀಶ್, ತಾರೇಶ್ ಕೆ.ಪಿ ಅಣಬೇರು, ವೀರೇಶ್ ಬಿ. ಜಿ. ಎಂ, ಮಲ್ಲಮ್ಮ ನಾಗರಾಜ್, ಓಂಕಾರಮ್ಮ ಆರ್ ಎಸ್, ಸುಭಾಷಿಣಿ ಮಂಜುನಾಥ್, ಸತ್ಯಭಾಮ ಮಂಜುನಾಥ್, ಅನ್ನಪೂರ್ಣ ಪಾಟೀಲ್, ಉಮಾದೇವಿ ಹಿರೇಮಠ್ ಅವರು ಕವನ ವಾಚಿಸಲಿದ್ದಾರೆ ಎಂದು ನಿಟ್ಟೂರ್ ತಿಳಿಸದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243