ದಿನದ ಸುದ್ದಿ
ದಾವಣಗೆರೆ | ಲಾಕ್‍ಡೌನ್ ಉಲ್ಲಂಘನೆ : ತಂಬಾಕು ನಿಯಂತ್ರಣ ತಂಡದಿಂದ ದಾಳಿ , ದಂಡ
ಸುದ್ದಿದಿನ,ದಾವಣಗೆರೆ : ಕೊರೋನ ವೈರಸ್ ಎರಡನೇ ಅಲೆಯ ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಸರ್ಕಾರ ಜಾರಿಗೊಳಿಸಿದ ಲಾಕ್‍ಡೌನ್ ಸಂದರ್ಭದಲ್ಲಿ ಅಗತ್ಯ ವಸ್ತುಗಳ ಮಾರಾಟ ಹೊರತುಪಡಿಸಿ ತೆರೆದ ಉಳಿದ ಅಂಗಡಿಗಳ ಮೇಲೆ ಮಹಾನಗರ ಪಾಲಿಕೆಯ ಕೋವಿಡ್-19 ಟಾಸ್ಕ್ ಪೊರ್ಸ್ ತಂಡ ಮತ್ತು ಜಿಲ್ಲಾ ತಂಬಾಕು ನಿಯಂತ್ರಣ ತನಿಖಾ ತಂಡದ ವತಿಯಿಂದ ಶುಕ್ರವಾರ ಜಂಟಿ ಕಾರ್ಯಚಾರಣೆ ನಡೆಸಲಾಯಿತು.
ನಗರದ ಎಂ.ಸಿ.ಸಿ ‘ಬಿ’ ಬ್ಲಾಕ್ ನಲ್ಲಿ ಕಾರ್ಯಚಾರಣೆ ನಡೆಸಿದ್ದು, ನಿಯಮ ಉಲ್ಲಂಘನೆಯ ಒಟ್ಟು 8 ಪ್ರಕರಣಗಳನ್ನು ದಾಖಲಿಸಿ, 2 ಸಾವಿರ ರೂ ದಂಡ ವಿಧಿಸಿ ಅಂಗಡಿಗಳನ್ನು ಮುಚ್ಚಿಸಲಾಯಿತು. ತಂಬಾಕು ನಿಯಂತ್ರಣ ತನಿಖಾ ತಂಡದಿಂದ ಅಕ್ರಮವಾಗಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವವರು ಮತ್ತು ಬಳಸುತ್ತಿರುವವರ ಮೇಲೆ 6 ಪ್ರಕರಣಗಳನ್ನು ದಾಖಲಿಸಿ ಒಂದು ಸಾವಿರ ರೂ ದಂಡ ವಿಧಿಸಲಾಗಿದೆ.
ಇದನ್ನೂ ಓದಿ | ಕೋವಿಡ್ ಸೆಂಟರ್ ನಲ್ಲಿ ಶಾಸಕ ರೇಣುಕಾಚಾರ್ಯ ವಾಸ್ತವ್ಯ
ಜಂಟಿ ಕಾರ್ಯಚರಣೆಯಲ್ಲಿ ಮಹಾನಗರ ಪಾಲಿಕೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪ್ರೀತಮ್, ಜಿಲ್ಲಾ ಸಲಹೆಗಾರ ಸತೀಶ್ ಕಲಹಾಳ, ಸಾಮಾಜಿಕ ಕಾರ್ಯಕರ್ತ ದೇವರಾಜ್ ಕೆ.ಪಿ, ಆರೋಗ್ಯ ನಿರೀಕ್ಷಕ ಮಹಾಂತೇಶ್, ಹರೀಶ್, ನಿಖಿಲ್, ರಾಜಪ್ಪ, ಬಡಾವಣೆ ಪೋಲಿಸ್ ಠಾಣೆಯ ಆನಂದ ಪೇದೆ ಪಾಲ್ಗೊಂಡಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243