ದಿನದ ಸುದ್ದಿ
ಟಿಕ್ ಟಾಕ್ ಹಾಡಿಗೆ ದಾವಣಗೆರೆ ಕಾರ್ಪೊರೇಟರ್ ಡ್ಯಾನ್ಸ್ ವಿಡಿಯೋ ವೈರಲ್ : ಲಾಕ್ ಡೌನ್ ವೇಳೆ ಇದೆಲ್ಲಾ ಬೇಕಿತ್ತಾ ? ನೆಟ್ಟಿಗರ ಆಕ್ರೋಶ
ಸುದ್ದಿದಿನ,ದಾವಣಗೆರೆ : ಕೊರೊನಾ ವೈರಸ್ ನಿಂದ ಇಡೀ ದೇಶ ಭಯದ ವಾತಾವರಣದಲ್ಲಿದೆ. ಪ್ರಧಾನಿಗಳ ಆದೇಶದಂತೆ ದೇಶವೇ ಲಾಕ್ ಡೌನ್ ಆಗಿದ್ದು, ಕೊರೊನಾ ವೈರಸ್ ಅನ್ನು ಹೇಗೆಲ್ಲಾ ತಡೆಯಬೇಕು ಎಂಬ ಕುರಿತು ಎಲ್ಲೆಲ್ಲೂ ಜಾಗೃತಿಯ ಸಂದೇಶಗಳನ್ನು ರವಾನಿಸಲಾಗುತ್ತಿದೆ.ಆದ ಕಾರಣ ಜನರು ಮನೆಯಲ್ಲೇ ಇರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇಂತಹ ದುರಿತ ಕಾಲದಲ್ಲಿ ಯಾರೇ ಆಗರಲಿ ಅವರು ಮನೆಯಲ್ಲೇ ಇರಬೇಕು ಎಂಬುದು ಆದೇಶ. ಗುಜರಾತ್,ಮಹಾರಾಷ್ಟ್ರ, ಕರ್ನಾಟಕದಲ್ಲಿನ ನಗರಗಳಲ್ಲಿ ಜೀವನ ನಡೆಸುತ್ತಿದ್ದ ಬಡ ಜನ ಗಂಟು ಮೂಟೆ ಕಟ್ಟಿಕೊಂಡು ಮಕ್ಕಳೊಂದಿಗೆ ನಡೆದೇ ಊರು ಸೇರ ಬಯಸಿದ್ದಾರೆ. ವಿದೇಶದಲ್ಲಿದ್ದ ಭಾರತೀಯರನ್ನು ಕೊರೋನಾದಿಂದ ರಕ್ಷಿಸಲು ಸರ್ಕಾರ ಅವರಿಗೆ ವಿಶೇಷ ವಿಮಾನಗಳನ್ನು ವ್ಯವಸ್ಥೆ ಮಾಡಿ ದೇಶಕ್ಕೆ ಕರೆತಂದಿತು. ಆದರೆ ಬಡ ಜನತೆ ಸಾಗರೋಪಾದಿಯಲ್ಲೇ ನಡೆದುಕೊಂಡು ಬರುತ್ತಿದ್ದರೂ ಅವರಿಗೆ ಯಾವ ವ್ಯವಸ್ಥೆಯನ್ನೂ ಮಾಡದೆ ಕೈಚೆಲ್ಲಿ ಕೂತಿದೆ.
ಇಂತದೊಂದು ಕೇಡುಗಾಲ್ಲಿ ಜನಪ್ರತಿನಿದ್ಇಯಾದ ದಾವಣಗೆರೆ ಮಹಾನಗರ ಪಾಲಿಕೆ ಕಾಂಗ್ರೆಸ್ ಹಾಲಿ ಸದಸ್ಯ, ವಿರೋಧ ಪಕ್ಷದ ನಾಯಕ ಎಚ್.ಎಸ್. ನಾಗರಾಜ್ ಹಾಗೂ ಪಾಲಿಕೆ ಕಾಂಗ್ರೆಸ್ ಮಾಜಿ ಮೇಯರ್ ದಂಪತಿ ಟಿಕ್ ಟಾಕ್ ಡ್ಯಾನ್ಸ್ ಮಾಡಿರುವುದು ಇದೀಗ ವೈರಲ್ ಆಗಿದೆ.
ಪತಿ ಹಾಲಿ ಕಾಂಗ್ರೆಸ್ ಕಾರ್ಪೊರೇಟರ್, ಪತ್ನಿ ಮಾಜಿ ಮೇಯರ್ ರಾಜಕೀಯ ಕುಟುಂಬ ಸಮಾಜಕ್ಕೆ ಮಾದರಿಯಾಗುವಂತೆ ಕೆಲಸ ಮಾಡುವುದು ಅವರ ಆದ್ಯ ಕರ್ತವ್ಯವಾಗಿತ್ತು. ಅದನ್ನ ಬಿಟ್ಟು ಈ ರೀತಿ ನೃತ್ಯ ಮಾಡಿದ್ದು ಅಕ್ಷರಶಃ ಅಪರಾಧ. ಇಡೀ ದೇಶವೇ ಕೊರೊನಾ ಭೀತಿಯಿಂದ ಸಂಕಷ್ಟದಲ್ಲಿದ್ದು, ಈ ಸಮಯದಲ್ಲಿ ಜನಪ್ರತಿನಿಧಿಗಳು ಸಮಾಜಕ್ಕೆ ಮಾದರಿಯಾಗುವ ಅಥವಾ ಕೊರೊನಾ ಬಗ್ಗೆ ಜಾಗೃತಿಗೊಳ್ಳುವ ಸಂದೇಶವುಳ್ಳ ವಿಡಿಯೋ ಮಾಡಬಹುದಿತ್ತು ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243