ರಾಜಕೀಯ
ಎಸ್.ಎಸ್. ಮಲ್ಲಿಕಾರ್ಜುನ್ ಗೆ ಟಿಕೆಟ್ ಫೈನಲ್ : ರಂಗೇರಲಿದೆ ದಾವಣಗೆರೆ ಲೋಕಸಮರ
ಸುದ್ದಿದಿನ,ದಾವಣಗೆರೆ : ದಾವಣಗೆರೆ ಲೋಕಸಭಾ ಚುನಾವಣೆ ಕಾಂಗ್ರೆಸ್ ಟಿಕೆಟ್ ಯಾರಿಗೆ ಎಂಬ ಕುತೂಹಲ ಕೆರಳಿಸಿತ್ತು. ಅಂತೂ ಎಸ್.ಎಸ್. ಮಲ್ಲಿಕಾರ್ಜುನ್ ಅವರಿಗೆ ಟಿಕೆಟ್ ಫೈನಲ್ ಆಗಿದೆ. ಕಾಂಗ್ರೆಸ್ ನ ಹಿರಿಯ ಮುಖಂಡರಾದ ಶಾಮನೂರು ಶಿವಶಂಕರಪ್ಪ ಅವರಿಗೆ ಮೊದಲು ಕಾಂಗ್ರೆಸ್ ಹೈ ಕಮಾಂಡ್ ಟಿಕೆಟ್ ಘೋಷಣೆ ಮಾಡಿತ್ತು. ಆದರೆ ಶಿವಶಂಕರಪ್ಪ ವಯಸ್ಸಿನ ಕಾರಣ ಹೇಳಿ ನಯವಾಗಯೇ ಟಿಕೆಟ್ ನಿರಾಕರಿಸಿದ್ದರು.
ಶಾಮನೂರು ಶಿವಶಂಕರಪ್ಪ ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಜಿಲ್ಲೆಯ ಕಾಂಗ್ರೆಸ್ ಅಧ್ಯಕ್ಷರಾದ ಮಂಜಪ್ಪ ಅವರ ಹೆಸರನ್ನು ಶಿವಶಂಕರಪ್ಪ ಶಿಫಾರಸ್ಸು ಮಾಡಿದ್ದರು. ಹಾಗೇ ಹೋರಾಟಗಾರ ತೇಜಸ್ವಿ ಪಟೇಲ್ ಅವರ ಹೆಸರೂ ಕೂಡ ಕೇಳಿ ಬಂದಿತ್ತಾದರೂ ಕೊನೆಗೆ ಎಸ್.ಎಸ್. ಮಲ್ಲಿಕಾರ್ಜುನ್ ಗೆ ಟಿಕೆಟ್ ಫೈನಲ್ ಆಗಿದೆ.
ಈ ಹಿನ್ನೆಲೆಯಲ್ಲಿ ಹೋರಾಟಗಾರ ತೇಜಸ್ವಿ ಪಟೇಲ್ ಹಾಗೂ ಮಂಜಪ್ಪ ಅವರು ಚರ್ಚಿಸಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ರಾವ್ ಜೊತೆ ಚರ್ಚಿಸಿದ್ದರು. ನಂತರ ತೇಜಸ್ವಿ ಪಟೇಲ್ ಹೆಸರು ಫೈನಲ್ ಆಗುತ್ತಲೇ ಎಸ್.ಎಸ್. ಮಲ್ಲಿಕಾರ್ಜುನ್ ಟಿಕೆಟ್ ನನಗೇ ಕೊಡಿ ಕೇಳಿದ್ದು, ಕೊನೆಗೆ ಅವರ ಹೆಸರೇ ಅಂತಿಮವಾಗಿದೆ.
ಎಸ್. ಎಸ್. ಮಲ್ಲಿಕಾರ್ಜುನ್ ಹೆಸರು ಪೈನಲ್ ಆಗುತ್ತಿದ್ದಂತೆಯೇ ದಾವಣಗೆರೆ ಕಾಂಗ್ರೆಸ್ ನ ಕಾರ್ಯಕರ್ತರು ಸಂತಸ ಪಟ್ಟಿದ್ದು, ಬಿಜೆಪಿಯ ಭದ್ರಕೋಟೆಯಾದ ದಾವಣಗೆರೆ ಲೋಕಸಭಾ ಚುನಾವಣೆ ರಂಗೇರಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401