ದಿನದ ಸುದ್ದಿ

ದಾವಣಗೆರೆ ವಿವಿ | ಸ್ವಪ್ನ ಎಸ್.ಎಂ. ಗೆ 5 ಚಿನ್ನದ ಪದಕ

Published

on

ಸುದ್ದಿದಿನ, ದಾವಣಗೆರೆ : ದಾವಣಗೆರೆ ವಿವಿಯಲ್ಲಿ ಸ್ನಾತಕೋತ್ತರ ಆಡಳಿತ ನಿರ್ವಹಣಾ ಶಾಸ್ತ್ರ (ಎಂಬಿಎ) ವಿಭಾಗದಲ್ಲಿ ವ್ಯಾಸಂಗ ಮಾಡಿದ ಸ್ವಪ್ನ ಎಸ್.ಎಂ. ಅವರು 05 ಚಿನ್ನದ ಪದಕಗಳನ್ನು ಬಾಚಿಕೊಂಡು ಚಿನ್ನದ ಹುಡುಗಿ ಎನಿಸಿಕೊಂಡರು.

ದಾವಣಗೆರೆ ವಿಶ್ವವಿದ್ಯಾನಿಲಯದ ಶಿವಗಂಗೋತ್ರಿ ಆವರಣದಲ್ಲಿ ಗುರುವಾರ ಏರ್ಪಡಿಸಲಾದ 09 ನೇ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ, ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಪಡೆದ ಒಟ್ಟು 44 ಅಭ್ಯರ್ಥಿಗಳ ಪೈಕಿ ವಿದ್ಯಾರ್ಥಿನಿಯರೇ (32) ಅತಿ ಹೆಚ್ಚು ಚಿನ್ನದಪದಕ ಪಡೆದುಕೊಂಡಿದ್ದು ವಿಶೇಷವೆನಿಸಿದರೆ, 12 ವಿದ್ಯಾರ್ಥಿಗಳು ಕೂಡ ಚಿನ್ನದ ಪದಕಗಳನ್ನು ಗಿಟ್ಟಿಸಿಕೊಂಡರು.

ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳು

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version