ದಿನದ ಸುದ್ದಿ

ದಾವಣಗೆರೆ ಮಹಾನಗರ ಪಾಲಿಕೆ | ಫೆ.02 ರಂದು ಆಯ-ವ್ಯಯ ಸಭೆ

Published

on

ಸುದ್ದಿದಿನ,ದಾವಣಗೆರೆ : ಮಹಾನಗರಪಾಲಿಕೆಯ 2021-22ನೇ ಸಾಲಿನ ಆಯ-ವ್ಯಯಗಳನ್ನು ತಯಾರಿಸಲು ಫೆ.02 ರಂದು ಸಂಜೆ 4 ಗಂಟೆಗೆ ಮಹಾನಗರ ಪಾಲಿಕೆಯ ಕೌನ್ಸಿಲ್ ಸಭಾಂಗಣದಲ್ಲಿ ಎರಡನೇ ಸಭೆಯನ್ನು ಆಯೋಜಿಸಲಾಗಿದೆ.

ಆಯವ್ಯಯ ಅಂದಾಜು ಪಟ್ಟಿಗೆ ಸಾರ್ವಜನಿಕರಿಂದ ಸಲಹೆಗಳನ್ನು ಪಡೆಯಲು ಉದ್ದೇಶಿಲಾಗಿದ್ದು ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕರು ಆಯ-ವ್ಯಯ ಅಂದಾಜು ಪಟ್ಟಿಗೆ ಸಲಹೆಗಳನ್ನು ನೀಡಬಹುದಾಗಿದೆ ಎಂದು ಮಹಾನಗರಪಾಲಿಕೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version