ದಿನದ ಸುದ್ದಿ

ದಾವಣಗೆರೆ ಮಿಲ್ಲತ್ ಪ್ರೌಢಶಾಲೆ | ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ

Published

on

ಸುದ್ದಿದಿನ,ದಾವಣಗೆರೆ : ಮಿಲ್ಲತ್ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ವತಿಯಿಂದ ತಂಬಾಕು ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳು ಹಾಗೂ ತಂಬಾಕನ್ನು ನಿಯಂತ್ರಿಸುವಲ್ಲಿ ವಿದ್ಯಾರ್ಥಿಗಳ ಪಾತ್ರ ವಿಷಯದ ಬಗ್ಗೆ ಏರ್ಪಡಿಸಲಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬುಧವಾರ ‘ಜೀವನ ಆಯ್ದುಕೊಳ್ಳಿ ತಂಬಾಕನ್ನಲ್ಲ ‘ ಎಂಬ ಲೋಗೋ ಇರುವ 11 ಬಹುಮಾನ ಫಲಕಗಳು ಮತ್ತು 14 ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.

ಈ ವೇಳೆ ಶಾಲೆಯ ಆಡಳಿತ ಅಧಿಕಾರಿಗಳಾದ ಸೈಯದ್ ಆಲಿ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಲಹೆಗಾರ ಸತೀಶ್ ಕಲಹಾಳ್, ಸಮಾಜ ಕಾರ್ಯಕರ್ತರಾದ ದೇವರಾಜ್.ಕೆ.ಪಿ, ಮುಖ್ಯ ಶಿಕ್ಷಕರಾದ ಜಾಕೀರ್ ಹುಸೇನ್, ಶಿಕ್ಷಕರುಗಳಾದ ಶಕೀರ ಅಹಮ್ಮದ್, ಸೈಯದ್ ಆಹೀಷಾ ಸಿದ್ದಿಕ್, ಸೈಯಾಜ್ ಪಾರ್ಕ್ ಹಾಗೂ ಇತರೆ ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version