ದಿನದ ಸುದ್ದಿ
ದಾವಣಗೆರೆ | ಫೆ.13ರಂದು ನೂತನ ಕೈಗಾರಿಕಾ ನೀತಿ 2020-25 ಕಾರ್ಯಕ್ರಮ
ಸುದ್ದಿದಿನ,ದಾವಣಗೆರೆ : ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ಮತ್ತು ಜಿಲ್ಲಾ ಕೈಗಾರಿಕಾ ಕೇಂದ್ರ ದಾವಣಗೆರೆ ಇವರ ಸಹಯೋಗದಲ್ಲಿ ನೂತನ ಕೈಗಾರಿಕಾ ನೀತಿ 2020-25 ಮತ್ತು ಹೂಡಿಕೆ ಅವಕಾಶಗಳು ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಫೆ. 13 ರ ಶನಿವಾರ ಸಂಜೆ 5 ಗಂಟೆಗೆ ಓಷಿಯನ್ ಪಾರ್ಕ್, ಹರಿಹರ ರಸ್ತೆ, ಜಿಎಂಐಟಿ ಕಾಲೇಜು ಎದುರು ದಾವಣಗೆರೆ ಇಲ್ಲಿ ಏರ್ಪಡಿಸಲಾಗಿದೆ.
ಕಾರ್ಯಕ್ರಮವನ್ನು ಜಿಲ್ಲಾಧಿಕಾರಿಗಳಾದ ಮಹಾಂತೇಶ್ ಬೀಳಗಿ ಉದ್ಘಾಟಿಸವರು. ಕಾಸಿಯಾ ಅಧ್ಯಕ್ಷರಾದ ಕೆ.ಬಿ. ಅರಸಪ್ಪ ಅಧ್ಯಕ್ಷತೆ ವಹಿಸುವರು. ಗೌರವಾನ್ವಿತ ಅಥಿತಿಗಳಾಗಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಅಪರ ನಿರ್ದೇಶಕರಾದ ಹೆಚ್.ಎಂ.ಶ್ರೀನಿವಾಸ ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಜಯಪ್ರಕಾಶ್ ನಾರಾಯಣ್ ಇವರು ಪಾಲ್ಗೊಳ್ಳುವರು.
ದಾವಣಗೆರೆ ಜಿಲ್ಲಾ ಮುದ್ರಣಕಾರರ ಸಂಘ, ಜಿಲ್ಲಾ ಸಣ್ಣ ಕೈಗಾರಿಕೋದ್ಯಮಿಗಳ ಸಂಘ, ಹರಿಹರ ಸಣ್ಣ ಕೈಗಾರಿಕರಗಳ ಸಂಘ, ದಾವಣಗೆರೆ ಜಿಲ್ಲಾ ಪ್ಲೆಕ್ಸ್ ಮುದ್ರಣಕಾರರ ಸಂಘ, ದಾವಣಗೆರೆ ಸ್ಟೀಲ್ ಫ್ಯಾಬ್ರಿಕೇಟ್‍ರ್ರ್ಸ್ ಅಸೋಷಿಯೇಸನ್ ಟೆಕ್ಸ್‍ಟೈಲ್ಸ್ ಪಾರ್ಕ್ ಅಸೋಷಿಯೇಸನ್ ಹಾಗೂ ಆಲ್ ಇಂಡಿಯಾ ಅಗ್ರಿಕಲ್ಚರ್ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್‍ನ ಸಹಯೋಗ ಕಾರ್ಯಕ್ರಮಕ್ಕೆ ಇರಲಿದೆ ಎಂದು ಪ್ರಕಟಣೆ ತಿಳಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243