ದಿನದ ಸುದ್ದಿ

ದಾವಣಗೆರೆ | ಹಳೇ ಕುಂದವಾಡ ಯುವಕರಿಂದ ಗೋಕಾಕ್ ಸಂತ್ರಸ್ತರಿಗೆ ನೆರವು

Published

on

ಸುದ್ದಿದಿನ,ದಾವಣಗೆರೆ: ಉತ್ತರ ಕರ್ನಾಟಕ ನೆರೆ ಹಾವಳಿಯಿಂದ ತತ್ತರಿಸಿದ್ದು, ಇಲ್ಲಿನ ಜನರಿಗೆ ನಗರದ ಹಳೇ ಕುಂದುವಾಡದ 25ಕ್ಕೂ ಯುವಕರು ತಂಡ 100ಚೀಲ ಅಕ್ಕಿ ಚೀಲ ಸೇರಿದಂತೆ ದಿನನಿತ್ಯ ವಸ್ತುಗಳ ಜೊತೆ ಗೋಕಾಕ್ ತಾಲ್ಲೂಕಿನ ವಿವಿಧ ಹಳ್ಳಿಗಳಿಗೆ ತೆರಳಿ ಸಂತ್ರಸ್ತರಿಗೆ ನೆರವು ನೀಡಿದ್ದಾರೆ.

ಹಳೇ ಕುಂದುವಾಡದ ಪ್ರತಿಮನೆಗೆ ತೆರಳಿದ ಯುವಕರ ತಂಡ ಅಕ್ಕಿ ಸೇರಿದಂತೆ ದಿನನಿತ್ಯದ ವಸ್ತುಗಳನ್ನು ಸಂಗ್ರಹಿಸಿದ್ದಾರೆ. 100ಕ್ಕೂ ಹೆಚ್ಚು ಚೀಲ ಅಕ್ಕಿ, 200 ಬೆಡ್ ಶಿಟ್,400ಕ್ಕೂ ಹೆಚ್ಚು ತೆಂಗಿನಕಾಯಿ,150ಕ್ಕೂ ಹೆಚ್ಚು ಸೀರೆಗಳು, ಪಂಚೆ, ಟವಲ್, ಸಕ್ಕರೆ, ಬಿಸ್ಕೆಟ್, ಸೋಪ್‌ಗಳು, ಅಡುಗೆ ಎಣ್ಣಿ, ಉಪ್ಪು, ಟೀ ಪುಡಿ ಸೇರಿದಂತೆ ದಿನನಿತ್ಯ ಬಳಸುವ ವಸ್ತುಗಳ ಜೊತೆ 25 ಯುವಕರ ತಂಡ ಗೋಕಾಕ್ ತಾಲ್ಲೂಕಿನ ವಿವಿಧ ಹಳ್ಳಿಗಳಿಗೆ ತೆರಳಿ ಸಂತ್ರಸ್ತರಿಗೆ ಹಂಚಿ ಮಾನವೀಯತೆ ಮೆರೆದಿದ್ದಾರೆ.

ನೆರೆ ಹಾವಳಿಗೆ ತುತ್ತಾದ
ಗೋಕಾಕ್ ನ 15ಕ್ಕೂ ಹೆಚ್ಚು ಹಳ್ಳಿಗಳಿಗೆ ತೆರಳಿ, ದವಸ ಧಾನ್ಯ ನೀಡುವುದರ ಜೊತೆಗೆ ಅವರ ಕಷ್ಟಗಳಿಗೆ ಸ್ಪಂದಿಸಿ ನೆರವಾಗಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಸ್ಥಳಿಯ ಹಿರಿಯ ರಾಮಜ್ಜ, ಹಳೇ ಕುಂದುವಾಡ ಯುವಕರು ನಮ್ಮ ಕಷ್ಟಗಳಿಗೆ ಸ್ಪಂದಿಸಿ ಮಾನವೀಯತೆ ತೋರಿದ್ದಾರೆ, ಅವರುಗಳಿಗೆಲ್ಲ ಒಳ್ಳೆಯದಾಗಲಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version