ದಿನದ ಸುದ್ದಿ

ಫ.ಗು.ಹಳಕಟ್ಡಿ’ಯವರು ಮರೆಯಲಾರದ ವಚನಗುಮ್ಮಟ

Published

on

ಸುದ್ದಿದಿನ,ದಾವಣಗೆರೆ : ಫ.ಗು.ಹಳಕಟ್ಟೆಯವರು ತಮ್ಮ ಜೀವನದಲ್ಲಿ ಉಪವಾಸವಿದ್ದು ಅನೇಕ ಕಷ್ಟ ನಷ್ಟಗಳನ್ನು ಅನುಭವಿಸಿ ತಮ್ಮ ಮಡದಿ ಭಾಗೀರತಿಯಮ್ಮನವರ ಧೀಶಕ್ತಿ ಪ್ರೇರಣೆಯಿಂದ ವಚನಗಳ ತಾಳೇಗರಿಯ ಕಟ್ಟುಗಳನ್ನು ನಾಡಿನಾದ್ಯಂತ ಅಲೆದಾಡಿ ಸಂಗ್ರಹಿಸಿ ಶರಣರ ಶಾಶ್ವತ ಮೌಲ್ಯಗಳನ್ನು ಕೊಟ್ಟು ಹೋಗಿದ್ದಾರೆ ಎಂದು ಜಿ.ಬಿ.ಚಂದ್ರಶೇಖರಪ್ಪ ತಿಳಿಸಿದರು.

ವಿದ್ಯಾನಗರ ಉದ್ಯಾನವನದಲ್ಲಿ ನಡೆವ ಕನ್ನಡಕಬ್ಬ ಉಗಾದಿಹಬ್ಬ ಕಾರ್ಯಕ್ರಮದಲ್ಲಿ ‘ವಚನ ಸಾಹಿತ್ಯಕ್ಕೆ ಫ.ಗು.ಹಳಕಟ್ಟಿ ಹಾಗೂ ಹರ್ಡೇಕರ್ ಮಂಜಪ್ಪ ಇವರ ಮರೆಯಲಾರದ ಕೊಡುಗೆ’ ವಿಷಯ ಕುರಿತ ಚಿಂತನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮುಂದುವರೆದು ಮಾತನಾಡಿದ ಅವರು ಒಮ್ಮೆ ಹಿರಿಯ ಕವಿ ಬಿ.ಎಂ.ಶ್ರೀಕಂಠಯ್ಯನವರು ಬಿಜಾಪುರಕ್ಕೆ ಬಂದಾಗ ನಾನು ಗೋಳಗುಮ್ಮಟ ನೋಡುವ ಮುಂಚೆ ಇಲ್ಲಿರುವ ವಚನಗುಮ್ಮಟ ಫ.ಗು.ಹಳಕಟ್ಟಿಯವರನ್ನು ದರ್ಶನ ಮಾಡಬೇಕಿದೆ ಎಂದು ಅವರ ಬಳಿ ಹೋಗಿ ಸಾಕಷ್ಟು ಸಮಯ ಚರ್ಚೆ ನಡೆಸಿ ಹಳಕಟ್ಡಿಯವರ ವಚನ ಸಂಗ್ರಹ ಕಾಯಕವನ್ನು ಕಂಡು ಮನಕರಗಿ ಹೋಗಿದ್ದರಂತೆ’ ಎಂದು ತಿಳಿಸಿದರು.

ಇನ್ನೋರ್ವ ಅತಿಥಿ ಬಂಕಾಪುರದ ಚನ್ನಬಸಪ್ಪನವರು ಹರ್ಡೇಕರ ಮಂಜಪ್ಪನವರು ಸಹ ಹಳಕಟ್ಟಿಯವರಂತೆ ತಮ್ಮ ವೈಯಕ್ತಿಕ ಸುಖ ಸಂತೋಷ ಮರೆತು ಶರಣರ ವಚನಗಳ ಪ್ರಸಾರ ಕಾರ್ಯದಲ್ಲಿ ಸಂಪೂರ್ಣ ತೊಡಗಿಸಿಕೊಂಡಿದ್ದರು. ಎಲ್ಲಾ ಕಡೆ ರಾಮನವಮಿ ಮಾಡುವುದ ಕಂಡು ನಾವು ಬಸವ ಜಯಂತಿ ಮಾಡೋಣ ಅಂತ ದಾವಣಗೆರೆಯಲಗಲಿ ಪ್ರಥಮ ಬಾರಿಗೆ ಆರಂಭಿಸುವ ಮೂಲಕ ನಾವೆಲ್ಲರೂ ಬಸವಾದಿ ಶಿವಶರಣರನ್ನು ಹಾಗೂ ಅವರು ರಚಿಸಿದ ಅನರ್ಘ್ಯ ರತ್ನಗಳಾದ ವಚನಗಳನ್ನು ಎಂದೆಂದೂ ಮರೆಯದಂತೆ ದೇಶ ವಿದೇಶಗಳ ತುಂಬಾ ಆರಾಧಿಸುವಂತೆ ಭದ್ರ ಬುನಾದಿ ಹಾಕಿ ಹೋಗಿದ್ದಾರೆಂದು ತಿಳಿಸಿದರು.

ವೇದಿಕೆಯ ಮೇಲೆ ಹಿರಿಯರಾದ ಎಂ.ಕರಿಯಪ್ಪನವರು , ವಿಶ್ರಾಂತ ಪ್ರಾಂಶುಪಾಲರಾದ ಜಿ .ಬಿ.ಚಂದ್ರಶೇಖರಪ್ಪ ಪಾಂಡೋಮಟ್ಟಿ ಕನ್ನಡ ಚಳುವಳಿಗಾರ ಬಂಕಾಪುರದ ಚನ್ನಬಸಪ್ಪ ವಿಶ್ರಾಂತ ರಾಜ್ಯ ವಾರ್ತಾಧಿಕಾರಿ ಹಾಗೂ ಗ್ರಂಥಸರಸ್ವತಿ ಅಧ್ಯಕ್ಷರಾದ ಆರ್.ಶಿವಕುಮಾರಸ್ವಾಮಿ ಕುರ್ಕಿ ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version